ADVERTISEMENT

ಬುಧವಾರ, 30–7–1969

​ಪ್ರಜಾವಾಣಿ ವಾರ್ತೆ
Published 29 ಜುಲೈ 2019, 20:00 IST
Last Updated 29 ಜುಲೈ 2019, 20:00 IST
   

ಕಾಂಗ್ರೆಸ್ ನಾಯಕರ ಜತೆ ಬಿಕ್ಕಟ್ಟು: ಜ. ಮಣೇಕ್ ಷಾ ನೆರವು ಕೋರಿದ ವದಂತಿ ನಿರಾಧಾರ ಎಂದು ಪ್ರಧಾನಿ

ನವದೆಹಲಿ, ಜುಲೈ 29– ಬೆಂಗಳೂರು ಎ.ಐ.ಸಿ.ಸಿ. ಅಧಿವೇಶನದ ನಂತರ ಕಾಂಗ್ರೆಸ್ ಪಕ್ಷದ ನಾಯಕರಿಗೂ ತಮಗೂ ಇರುವ ವಿವಾದದ ವಿಷಯದಲ್ಲಿ ಸೈನ್ಯದ ದಳಪತಿ ಜನರಲ್ ಮಣೇಕ್ ಷಾ ಅವರ ನೆರವನ್ನು ತಾವು ಕೋರಿರುವುದಾಗಿ ವರದಿಯಾಗಿರುವ ಸಂಗತಿಯನ್ನು ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಲೋಕಸಭೆಯಲ್ಲಿ ಅಲ್ಲಗಳೆದರು.

ಬ್ಯಾಂಕ್ ರಾಷ್ಟ್ರೀಕರಣದ ಬಗ್ಗೆ ಚರ್ಚೆಯ ಕಾಲದಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀ ಜೆ.ಬಿ. ಕೃಪಲಾನಿ ಅವರು ಪ್ರಧಾನಿ ಹಾಗೂ ಸೈನ್ಯದ ದಳಪತಿ ನಡುವೆ ಭೇಟಿ ನಡೆಯಿತೆಂಬ ‘ವದಂತಿ’ಯನ್ನುಪ್ರಸ್ತಾಪಿಸಿದ್ದರು.

ADVERTISEMENT

14 ಭಾರಿ ಬ್ಯಾಂಕುಗಳ ರಾಷ್ಟ್ರೀಕರಣಕ್ಕೆ ಲೋಕಸಭೆ ಅಸ್ತು

ನವದೆಹಲಿ, ಜುಲೈ 29– ರಾಷ್ಟ್ರದ ಹದಿನಾಲ್ಕು ಭಾರಿ ವಾಣಿಜ್ಯ ಬ್ಯಾಂಕುಗಳ ರಾಷ್ಟ್ರೀಕರಣಕ್ಕೆ ಲೋಕಸಭೆ ಇಂದು ಧ್ವನಿಮತದ ಮೂಲಕ ತಾತ್ವಿಕ ಒಪ್ಪಿಗೆ ನೀಡಿತು. ಇದಕ್ಕೆ ಮುನ್ನ ಬ್ಯಾಂಕಿಂಗ್ ಸಂಸ್ಥೆಗಳ (ಸ್ವಾಧೀನ ಮತ್ತು ವರ್ಗಾವಣೆ) ಮಸೂದೆಯನ್ನು ಸೆಲೆಕ್ಟ್ ಸಮಿತಿಯ ಪರಿಶೀಲನೆಗೆ ಒಪ್ಪಿಸಬೇಕೆಂದು ಜನಸಂಘದ ಸದಸ್ಯರು ತಂದಿದ್ದ ತಿದ್ದುಪಡಿಯನ್ನು 222–39 ಮತಗಳಿಂದ ಸಭೆ ತಿರಸ್ಕರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.