75 ವರ್ಷಗಳ ಹಿಂದೆ
ಮದರಾಸ್, ಜುಲೈ 27– ಸಂಸ್ಥಾನದ ನಾನಾ ಕಾಲೇಜುಗಳ ಪ್ರವೇಶಕ್ಕೆ ವಿದ್ಯಾರ್ಥಿಗಳನ್ನು ಆರಿಸಲು ‘ಮತ, ಕುಲ ಅಥವಾ ಜಾತಿ’ ಆಧಾರವಾಗದು ಎಂಬುದಾಗಿ ಮದರಾಸ್ ಶ್ರೇಷ್ಠ ನ್ಯಾಯಸ್ಥಾನದ ಪೂರ್ಣ ಪೀಠ ಇಂದು ತೀರ್ಪು ನೀಡಿತು.
ಮದರಾಸಿನ ಕಾಲೇಜುಗಳಿಗೆ ಪ್ರವೇಶ ಕೊಡುವ ವಿಚಾರದಲ್ಲಿ ಮದರಾಸ್ ಸರ್ಕಾರ ಹೊರಡಿಸಿದ ಕೋಮುವಾರು ಆಜ್ಞೆಯ ನ್ಯಾಯಬದ್ಧತೆಯನ್ನು ಪ್ರಶ್ನಿಸಿ ಇಬ್ಬರು ವಿದ್ಯಾರ್ಥಿಗಳು ಸಲ್ಲಿಸಿದ್ದ, ಮ್ಯಾಂಡಮಸ್ ಅರ್ಜಿಯ ಕುರಿತ ತೀರ್ಪು ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.