‘ನಾಪತ್ತೆ’ಯಾಗಿದ್ದ ಶಾಸಕ ಪ್ರತ್ಯಕ್ಷ
ಬೆಂಗಳೂರು, ಸೆಪ್ಟೆಂಬರ್ 16: ನಾಪತ್ತೆಯಾಗಿದ್ದ ಭದ್ರಾವತಿ ಶಾಸಕ ಎಂ.ಜೆ. ಅಪ್ಪಾಜಿ (47) ಅವರು ಮೈಸೂರಿನಲ್ಲಿದ್ದು, ಇಂದು ನಗರಕ್ಕೆ ಹಿಂತಿರುಗಿದ್ದಾರೆ.
‘ತಾವು ಖಾಸಗಿ ಕಾರ್ಯ ನಿಮಿತ್ತ ಮೈಸೂರಿನ ಸ್ನೇಹಿತರ ಮನೆಗೆ ತೆರಳಿದ್ದಾಗಿ’ ಸುದ್ದಿಗಾರರಿಗೆ ತಿಳಿಸಿದರು.
‘ಮೈಸೂರಿನಿಂದ ಭದ್ರಾವತಿಯ ಮನೆಯನ್ನು ಸಂಪರ್ಕಿಸಲು ಯತ್ನಿಸಿದ್ದೆ. ನಂತರ ವಿಐಎಸ್‌ಎಲ್‌ನ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿ ತಾವು ಸೆ. 15ರಂದು ಭದ್ರಾವತಿಗೆ ಬರುವುದಾಗಿ ಮನೆಗೆ ತಿಳಿಸುವಂತೆ ಹೇಳಿದ್ದೆ. ಮನೆಯವರು ಅಧಿಕಾರಿಯ ಮಾತನ್ನು ನಂಬದ ಕಾರಣ ಅವಾಂತರಕ್ಕೆ ಎಡೆ ಮಾಡಿಕೊಟ್ಟಿತು’ ಎಂದು ವಿವರಿಸಿದರು.
ಸಿಡ್ನಿ ಒಲಿಂಪಿಕ್ಸ್: ಮೊದಲ ದಿನ ಭಾರತಕ್ಕೆ ನಿರಾಸೆ
ಸಿಡ್ನಿ, ಸೆಪ್ಟೆಂಬರ್ 16: ಭಾರತ ತಂಡದವರು ಇಪ್ಪತ್ತೇಳನೇ ಒಲಿಂಪಿಕ್ಸ್‌ನ ಮೊದಲ ದಿನ ನಿರಾಶಾದಾಯಕ ಫಲಿತಾಂಶ ನೀಡಿದರು. ಆದರೆ, ಆತಿಥೇಯ ಆಸ್ಟ್ರೇಲಿಯಾವು ಈಜಿನಲ್ಲಿ ಅಮೆರಿಕವನ್ನು ಹಿಂದಿಕ್ಕಿ ಪೂರ್ಣ ಮೇಲುಗೈ ಸಾಧಿಸಿತು.
ಭಾರತದ ಅಂಜಲಿ ವೇದ್‌ಪಾಠಕ್ ಹತ್ತು ಮೀಟರ್ಸ್ ಏರ್ ರೈಫಲ್ ಸ್ಪರ್ಧೆಯ ಮಹಿಳಾ ವಿಭಾಗದಲ್ಲಿ ಫೈನಲ್ ತಲುಪಿದರಾದರೂ ಅಂತಿಮ ವಾಗಿ ಕೊನೆಯ ಸ್ಥಾನಕ್ಕಿಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.