ಲಕ್ನೋ, ಅ.3– ಪೆಸಿಫಿಕ್ ಸಂಪರ್ಕ ಸಂಸ್ಥೆಯ ಹನ್ನೊಂದನೆಯ ಸಮ್ಮೇಳನವನ್ನು ಲಕ್ನೋ ನಗರದಲ್ಲಿ ಭಾರತದ ಮಹಾ ಪ್ರಧಾನಿ ಪಂಡಿತ್ ನೆಹರೂ ಅವರು ಉದ್ಘಾಟಿಸುತ್ತಾ, ‘ಜನರು ಮೂರನೆಯ ಯುದ್ಧದ ಮಾತೆತ್ತುವಾಗ ಕಳೆದ ಮಹಾಯುದ್ಧದ ಪಾಠ ಪ್ರತಿಫಲಗಳೇನೆಂಬುದನ್ನರಿಯಬೇಕು. ಕಳೆದೆರಡು ಮಹಾ ಯುದ್ಧಗಳಿಂದ ವಿಶ್ವದ ಯಾವ ಸಮಸ್ಯೆಗಳೂ ಬಗೆಹರಿಯಲಿಲ್ಲ. ಬದಲಿಗೆ ಹಲವು ಹೊಸ ಸಮಸ್ಯೆಗಳು ಉದ್ಭವಿಸಿದವು’ ಎಂದು
ನುಡಿದರು.
ಮಾನವ ಕುಲಕ್ಕೆ ವಿನಾಶಕಾರಿ ಉಪದ್ರವವಾದ ಮೂರನೆಯ ಮಹಾ ಯುದ್ಧಕ್ಕೆ ಎಡೆಗೊಡುವಂತಹ ಸಾಹಸ ಕಾರ್ಯಗಳಲ್ಲಿ ತೊಡಗಲು ನಾವು ಉಧ್ಯುಕ್ತರಾಗಬಾರದು ಎಂದು ನುಡಿದರು.
ಮಧ್ಯಭಾರತದ ಹೊಸ ಮಂತ್ರಿ ಮಂಡಲ ರಚನೆ
ಇಂದೋರ್, ಅ. 3– ಮಧ್ಯಭಾರತ ಕಾಂಗ್ರೆಸ್ ಶಾಸನಸಭಾ ಪಕ್ಷದ ನೂತನ ನಾಯಕರಾಗಿ ಚುನಾಯಿತರಾಗಿರುವ ಶ್ರೀ ತಾಕಥ್‌ಮಲ್ ಜೈನ್ ಇಂದು ಬೆಳಿಗ್ಗೆ ಸರ್ದಾರ್ ಪಟೇಲರನ್ನು ಭೇಟಿ ಮಾಡಿ ಅವರೊಂದಿಗೆ ಹೊಸ ಸಚಿವ ಸಂಪುಟದ ರಚನೆ ಬಗ್ಗೆ ಮಾತುಕತೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.