75 ವರ್ಷಗಳ ಹಿಂದೆ
ಗೋದಾವರಿ ಜಿಲ್ಲೆಯಲ್ಲಿ ಹಸಿವಿನ ಹಾವಳಿ
ಕಾಕಿನಾಡ, ಆಗಸ್ಟ್ 21– ಗೋದಾವರಿ ಜಿಲ್ಲೆಯ ಪೀಠಾಪುರಂ ತಾಲ್ಲೂಕಿನ ತೀರ ಪ್ರದೇಶದ ಅನೇಕ ಗ್ರಾಮಗಳಲ್ಲಿ ಜನ ಹೊಟ್ಟೆಗಿಲ್ಲದೆ ನರಳುತ್ತಿದ್ದಾರೆ ಎಂಬುದಾಗಿ ಮದರಾಸ್ ಶಾಸನಸಭೆಯ ಕಾಂಗ್ರೆಸ್ ಸದಸ್ಯ ಮೂರ್ತಿ ಅವರು ತಿಳಿಸಿದರು.
‘ಹೊಟ್ಟೆಗಿಲ್ಲದೆ ಬಳಲಿ ಬೆಂಡಾಗಿ ತುತ್ತು ಅನ್ನಕ್ಕಾಗಿ ಹೆಂಗಸರು, ಮಕ್ಕಳು, ಗಂಡಸರು ಕೈಯೆತ್ತಿ ಬೇಡುವ ಹಾಗೂ ಅಧಿಕಾರಿ ವರ್ಗದವರು ಹಸಿದವರಿಗೆ ಆಹಾರ ಒದಗಿಸಬೇಕಾದ್ದು ತಮ್ಮ ಕರ್ತವ್ಯವೆಂದು ತಿಳಿಯದೆ ನಿರ್ಲಕ್ಷ್ಯ ತೋರಿಸುವ ದೃಶ್ಯ ಕಂಡು ಸಿಡಿಲು ಬಡಿದಂತಾಯಿತು’ ಎಂದು ತಮ್ಮ ಅನುಭವವನ್ನು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.