
ಪ್ರಜಾವಾಣಿ ವಾರ್ತೆಪಾರ್ಲಿಮೆಂಟಿನ ದುರ್ಗಂಧ!
ನವದೆಹಲಿ, ನ. 16– ಪಾರ್ಲಿಮೆಂಟ್ ಭವನದಲ್ಲಿರುವ ಮುಚ್ಚಿದ್ದ ಗವಾಕ್ಷಿಗಳನ್ನು ಇಂದು ತೆರೆಯಬೇಕಾಯಿತು. ಅಧಿವೇಶನ ನಡೆಯುತ್ತಿದ್ದಾಗ ಶ್ರೀ ಮಹಾ ವೀರತ್ಯಾಗಿಯವರು ‘ಉಸಿರು ಕಟ್ಟುವ ದುರ್ಗಂಧ’ ಬರುತ್ತಿದೆಯೆಂದು ಉಪಾಧ್ಯಕ್ಷ ಅನಂತಶಯನಂ
ಅಯ್ಯಂಗಾರ್ಯರಿಗೆ ದೂರು ಹೇಳಿದರು. ಆರೋಗ್ಯ ಮಂತ್ರಿ ರಾಜಕುಮಾರಿ ಅಮೃತಕೌರರೂ, ಇತರ ಸದಸ್ಯರೂ ಮೂಗುಗಳಿಗೆ ಕರವಸ್ತ್ರ ಮುಚ್ಚಿಕೊಳ್ಳಬೇಕಾಯಿತು.
ದುರ್ಗಂಧಕ್ಕೆ ಕಾರಣವೇನು ಎಂಬುದನ್ನು ಪರಿಶೀಲಿಸಲು ಪಾರ್ಲಿಮೆಂಟ್ ಸೆಕ್ರೆಟರಿಯೇಟಿನ ಅಧಿಕಾರಿಗಳನ್ನು ಭವನದ ಹತ್ತಿರ ಕಳಿಸಲಾಗಿದೆ ಎಂದು ಉಪಾಧ್ಯಕ್ಷರಾದ ಅನಂತಶಯನಂ ಅವರು ಮಾಹಿತಿ ನೀಡಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.