ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ| ಸೋಮವಾರ, 01-12-1997

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 19:30 IST
Last Updated 30 ನವೆಂಬರ್ 2022, 19:30 IST
   

ಸರ್ಕಾರ ರಚನೆ ಅವಕಾಶ ಕೋರಿ ಬಿಜೆಪಿ ಮನವಿ

ನವದೆಹಲಿ, ನ. 30– ಕೇಂದ್ರದಲ್ಲಿ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಭಾರತೀಯ ಜನತಾ ಪಕ್ಷ ಮತ್ತು ಅದರ ಮಿತ್ರ ಪಕ್ಷಗಳು ಇಂದು ರಾಷ್ಟ್ರಪತಿ ಕೆ.ಆರ್‌.ನಾರಾಯಣನ್‌ ಅವರಿಗೆ ಮನವಿ ಸಲ್ಲಿಸಿದವು.

ಆದರೆ, ಈಗ ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಧ್ರುವೀಕರಣ ಆರಂಭವಾಗಿದ್ದು, ಅದಕ್ಕಾಗಿ ತಮಗೆ ಸರ್ಕಾರ ರಚನೆಗಾಗಿ ಕಾಲಾವಕಾಶ ನೀಡಬೇಕೆಂದು ಭಾರತೀಯ ಜನತಾ ಪಕ್ಷ ಮತ್ತು ಅದರ ಮಿತ್ರ ಪಕ್ಷಗಳ ನಾಯಕರು, ರಾಷ್ಟ್ರಪತಿ ಅವರನ್ನು ಕೋರಿದರು.

ADVERTISEMENT

ಕೇವಲ ಸರ್ಕಾರ ರಚಿಸುವುದಾಗಿ ಕೋರಿಕೆ ಸಲ್ಲಿಸಿದಾಕ್ಷಣ ಸರ್ಕಾರ ರಚಿಸಲು ಯಾವುದೇ ಪಕ್ಷವನ್ನು ತಾವು ಆಮಂತ್ರಿಸುವುದಿಲ್ಲ. ಸರ್ಕಾರ ರಚನೆಗೆ ಬೇಕಾಗಿರುವ 270 ಮಂದಿ ಸದಸ್ಯರನ್ನು ತಮ್ಮ ಬಳಿ ಪ್ರದರ್ಶಿಸಬೇಕು. ಆ ಬಗೆಗೆ ತಮಗೆ ತೃಪ್ತಿಯಾದರೆ ಮಾತ್ರ ಸರ್ಕಾರ ರಚನೆಗೆ ಒಪ್ಪಿಗೆ ಕೊಡುವುದಾಗಿ ರಾಷ್ಟ್ರಪತಿ ಅವರು ಬಿಜೆಪಿ ನಿಯೋಗಕ್ಕೆ ತಿಳಿಸಿದರೆಂದು ಗೊತ್ತಾಗಿದೆ.

ಭಾರತ ಜತೆ ಉತ್ತಮ ಸ್ನೇಹ ಬಾಂಧವ್ಯಕ್ಕೆ ಅಮೆರಿಕ ಆದ್ಯತೆ

ಬೆಂಗಳೂರು, ನ. 30– ಭಾರತದೊಂದಿಗೆ ಉತ್ತಮ ಸಂಬಂಧ ಮತ್ತು ಬಾಂಧವ್ಯವನ್ನು ಹೊಂದುವುದು ಅಮೆರಿಕದ ಆದ್ಯತೆಗಳಲ್ಲಿ ಒಂದಾಗಿದೆ ಎಂದು ಅಮೆರಿಕದ ಆರೋಗ್ಯ ಮತ್ತು ಮಾನವ ಸೇವಾ ಕಾರ್ಯದರ್ಶಿ ಡಾ.ಡೊನ್ನಾ ಇಶಲಾಲ ಅವರು ಇಂದು ಇಲ್ಲಿ ತಿಳಿಸಿದರು.

ಎರಡು ದಿನಗಳ ಅಧಿಕೃತ ಭೇಟಿಗಾಗಿ ಇಂದು ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಭಾರತದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಅಮೆರಿಕ ಮತ್ತು ಭಾರತದ ಬಾಂಧವ್ಯ ವೃದ್ಧಿಸಲೆಂದೇ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ತಮ್ಮ ಸಚಿವ ಸಂಪುಟದ ಹಿರಿಯ ಸದಸ್ಯರನ್ನು ಇಲ್ಲಿಗೆ ಕಳುಹಿಸುತ್ತಿರುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.