ADVERTISEMENT

25 ವರ್ಷಗಳ ಹಿಂದೆ: 4-12-1996, ಬುಧವಾರ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 19:30 IST
Last Updated 3 ಡಿಸೆಂಬರ್ 2021, 19:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಎಚ್‌ಎಎಲ್‌ನಿಂದ 50 ಸೀಟು ವಿಮಾನ ನಿರ್ಮಾಣ: ಪ್ರಧಾನಿ

ಬೆಂಗಳೂರು, ಡಿ. 3– 800 ಕೋಟಿ ಅಂದಾಜು ವೆಚ್ಚದಲ್ಲಿ 50 ಮತ್ತು 100 ಸೀಟು ಸಾಮರ್ಥ್ಯದ ಎರಡು ವಿಮಾನ ತಯಾರಿಕಾ ಘಟಕಗಳನ್ನು ಹಿಂದೂಸ್ತಾನ್‌ ವಿಮಾನ ತಯಾರಿಕಾ ಸಂಸ್ಥೆಯ ಆಶ್ರಯದಲ್ಲಿ ಆರಂಭಿಸುವುದಾಗಿ ಇಂದು ಇಲ್ಲಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಪ್ರಕಟಿಸಿದರು.

50 ಸೀಟುಗಳ ವಿಮಾನ ನಿರ್ಮಾಣ ಬೆಂಗಳೂರು ಎಚ್‌ಎಎಲ್‌ನಲ್ಲಿ ಆರಂಭಗೊಳ್ಳಲಿದ್ದು, ‘ಇದು ರಾಜ್ಯಕ್ಕೆ ಕೇಂದ್ರ ನೀಡುತ್ತಿರುವ ಉಡುಗೊರೆ’ ಎಂದರು.

ADVERTISEMENT

ರಾಜ್ಯ ಭಿನ್ನಮತೀಯರ ಸಮಸ್ಯೆ ಶೀಘ್ರ ಪರಿಹಾರ: ದೇವೇಗೌಡ ಭರವಸೆ

ಬೆಂಗಳೂರು, ಡಿ. 3– ಕರ್ನಾಟಕ ಮತ್ತು ಬಿಹಾರ ರಾಜ್ಯಗಳಲ್ಲಿ ಜನತಾದಳದೊಳಗಿನ ಭಿನ್ನಮತೀಯರ ಸಮಸ್ಯೆಗಳನ್ನು ಶೀಘ್ರ ಬಗೆಹರಿಸುವ ವಿಶ್ವಾಸವನ್ನು ಪ್ರಧಾನಿ ಎಚ್‌.ಡಿ. ದೇವೇಗೌಡ ಇಂದು ಇಲ್ಲಿ ವ್ಯಕ್ತಪಡಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.