ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ| ಬುಧವಾರ 14–02–1996

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 15:31 IST
Last Updated 13 ಫೆಬ್ರುವರಿ 2021, 15:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಅನುಕಂಪದ ನೌಕರಿ ಸರ್ಕಾರದ ಕಳಕಳಿ

ಬೆಂಗಳೂರು, ಫೆ. 13–ಸರ್ಕಾರಿ ಸೇವೆಯಲ್ಲಿರುವಾಗಲೇ ಅಸುನೀಗುವ ನೌಕರರ ಕುಟುಂಬದವರಲ್ಲಿ ಒಬ್ಬರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡುವ ಬಗ್ಗೆ ರಾಜ್ಯ ಸರ್ಕಾರ ತೀವ್ರ ಕಳಕಳಿಯನ್ನು ಹೊಂದಿದ್ದು, ಇನ್ನು ಎರಡು ತಿಂಗಳ ಒಳಗಾಗಿ ಈ ಸಂಬಂಧದಲ್ಲಿ ಆದೇಶವನ್ನು ಹೊರಡಿಸಲಿದೆ.

ಸರ್ಕಾರ ಈ ನಿಟ್ಟಿನಲ್ಲಿ ಕೈಗೊಳ್ಳುವ ನಿರ್ಧಾರ, ಸಂಸಾರದ ನೊಗವನ್ನು ಹೆಗಲಿಗೇರಿಸಿಕೊಂಡಿದ್ದ ಮನೆ ಒಡೆಯನನ್ನು ಕಳೆದುಕೊಂಡ ನತದೃಷ್ಟರ ಪಾಲಿಗೆ ಒಂದು ವಿಧದಲ್ಲಿ ಮುಂದಿನ ಬದುಕಿಗೆ ಆಶಾಕಿರಣ ಆಗಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.