ADVERTISEMENT

50 ವರ್ಷಗಳ ಹಿಂದೆ: ಸೋಮವಾರ 29.11.1971

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 19:30 IST
Last Updated 28 ನವೆಂಬರ್ 2021, 19:30 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಭದ್ರತಾ ಸಮಿತಿಯಲ್ಲಿ ಪ್ರಸ್ತಾಪ ನಿಷ್ಪ್ರಯೋಜಕ: ಇಂದಿರಾ ಸ್ಪಷ್ಟನೆ

ಜೈಪುರ, ನ. 28–‘ಭಾರತ ಉಪ ಖಂಡದಲ್ಲಿನ ಈಗಿನ ಬಿಕ್ಕಟ್ಟಿನ ಪರಿಸ್ಥಿತಿ ವಿಷಯವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಯಲ್ಲಿ ಪ್ರಸ್ತಾಪಿಸುವುದರಿಂದ ಆ ಪರಿಸ್ಥಿತಿ ಸಡಿಲಗೊಳ್ಳುವುದಕ್ಕೆ ಸಹಾಯಕವಾಗುವುದಿಲ್ಲ. ಅಲ್ಲದೆ ಪ್ರಸಕ್ತ ಪರಿಸ್ಥಿತಿ ಮೇಲೆ ಯಾವ ವಾಸ್ತವಿಕ ಪರಿಣಾಮವೂ ಉಂಟಾಗದು’ ಎಂದು ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರು ಇಂದು ಹೇಳಿದರು.

ಇಲ್ಲಿ ಭಾರಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ಅವರು, ‘ಪಾಕಿಸ್ತಾನವು ಈ ಹಿಂದೆ ಭಾರತದ ಮೇಲೆ ನಾಲ್ಕು ಬಾರಿ ದಾಳಿ ಮಾಡಿದೆ. ನಾವು ಪಾಕಿಸ್ತಾನದ ಮೇಲೆ ದಾಳಿ ಮಾಡಲಿಲ್ಲವೆಂಬುದು ಸುಸ್ಪಷ್ಟ. ನಮ್ಮ ಮೇಲೆ ಆಕ್ರಮಣ ನಡೆದಾಗ ಭದ್ರತಾ ಸಮಿತಿ ಏನು ಮಾಡಿತು. ಅದು ಅಕ್ರಮಣಕಾರ ಯಾರು ಎಂದೂ ಸಹಾ ಹೆಸರಿಸಲಿಲ್ಲ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.