ADVERTISEMENT

ಮಂಗಳವಾರ, 10–6–1969

​ಪ್ರಜಾವಾಣಿ ವಾರ್ತೆ
Published 9 ಜೂನ್ 2019, 18:30 IST
Last Updated 9 ಜೂನ್ 2019, 18:30 IST

ಮೈಸೂರಿನಲ್ಲಿ ತೆಲಂಗಾಣ ಪರಿಸ್ಥಿತಿ ಉದ್ಭವಿಸದಿರಲಿ– ಶ್ರೀ ಕೆಂಗಲ್ ಆಶಯ

ಬೆಂಗಳೂರು, ಜೂನ್ 9– ಮೈಸೂರು ರಾಜ್ಯದಲ್ಲಿ ಪರಿಸ್ಥಿತಿ ‘ತೆಲಂಗಾಣ ಪರಿಸ್ಥಿತಿ’ಯ ಮಟ್ಟವನ್ನು ಮುಟ್ಟಲು ಸಂಬಂಧಪಟ್ಟವರು ಅವಕಾಶ ಕೊಡುವುದಿಲ್ಲವೆಂದು ಆಡಳಿತ ಸುಧಾರಣೆ ಆಯೋಗದ ಅಧ್ಯಕ್ಷ ಶ್ರೀ ಕೆ. ಹನುಮಂತಯ್ಯ ಇಂದು ಇಲ್ಲಿ ಆಶಿಸಿದರು.

1962ರಲ್ಲಿ ಭಾರತದ ಪರಾಭವಕ್ಕೆ ಉನ್ನತಮಟ್ಟದ ತಪ್ಪುಗಳೇ ಕಾರಣ

ADVERTISEMENT

ನವದೆಹಲಿ, ಜೂನ್ 9– ಚೀನೀಯರೊಡನೆ 1962ರಲ್ಲಿ ನಡೆದ ಯುದ್ಧದಲ್ಲಿ ಭಾರತ ಪರಾಭವಗೊಂಡುದಕ್ಕೆ ಉಪಕರಣಗಳ ಕೊರತೆಯೊಂದೇ ಅತ್ಯಂತ ಮುಖ್ಯ ಕಾರಣವಲ್ಲ ಎಂದು ಜನರಲ್ ಪಿ.‍ಪಿ. ಕುಮಾರಮಂಗಳಂ ಅವರು ತಿಳಿಸಿದ್ದಾರೆ.

ಭೂಸೈನ್ಯದ ಪ್ರಧಾನ ದಂಡನಾಯಕರ ಅಧಿಕಾರದಿಂದ ಬೆಂಗಳೂರಿನಲ್ಲಿ ಕಳೆದ ಶನಿವಾರ ನಿವೃತ್ತರಾದ ಅವರು ಸಂದರ್ಶನ
ವೊಂದರಲ್ಲಿ, ಬಹುತೇಕ ತಪ್ಪುಗಳನ್ನು ‘ಉನ್ನತ ಮಟ್ಟದಲ್ಲಿ ಮಾಡಲಾಗಿದೆಯೇ ಹೊರತು ಕೆಳಮಟ್ಟಗಳಲ್ಲಿ ಅಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.