ADVERTISEMENT

ಮಂಗಳವಾರ, 2–12–1969

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 18:34 IST
Last Updated 1 ಡಿಸೆಂಬರ್ 2019, 18:34 IST

ಬೆಳಗಾವಿ ನಗರ ಮಹಾರಾಷ್ಟ್ರಕ್ಕೆ?

ನವದೆಹಲಿ, ಡಿ. 1– ಬೆಳಗಾವಿಯನ್ನು ಎರಡು ಭಾಗ ಮಾಡಿ ಮೈಸೂರು– ಮಹಾರಾಷ್ಟ್ರ ರಾಜ್ಯಗಳಿಗೆ ಹಂಚಲು ಕೇಂದ್ರ ಸರ್ಕಾರ ಆಲೋಚಿಸುತ್ತಿದೆಯೆಂದು ವರದಿಯಾಗಿದೆ.

ಬೆಳಗಾವಿಯನ್ನು ಎರಡಾಗಿ ವಿಂಗಡಿಸಲು ಅಲ್ಲಿರುವ ರೈಲ್ವೆ ಮಾರ್ಗವನ್ನು ವಿಭಜನಾ ರೇಖೆಯನ್ನಾಗಿ ಪರಿಗಣಿಸಲಾಗುವುದು. ಈಗಿನ ಸೂಚನೆಯಂತೆ ಬೆಳಗಾವಿ ನಗರ ಮಹಾರಾಷ್ಟ್ರದ ಪಾಲಾಗುವುದು. ರೈಲ್ವೆ ಮಾರ್ಗದ ಮತ್ತೊಂದು ಬದಿಯಲ್ಲಿರುವ ಶಹಪುರ ಮೈಸೂರಿನಲ್ಲೇ ಉಳಿಯುವುದು. ಮೈಸೂರು– ಮಹಾರಾಷ್ಟ್ರ ಗಡಿ ವಿವಾದ ಹಾಗೂ ಚಂಡೀಗಡ ಸಮಸ್ಯೆಯನ್ನು ಇತ್ಯರ್ಥಗೊಳಿಸುವುದಕ್ಕಾಗಿ, ವಿವಾದಕ್ಕೊಳಗಾಗಿರುವ ಪ್ರದೇಶಗಳನ್ನು ಸಮಪಾಲು ಮಾಡಿ ಹಂಚಿ ಕೈತೊಳೆದುಕೊಳ್ಳುವ ಹಾದಿಯಲ್ಲಿ ಕೇಂದ್ರ ಸರ್ಕಾರ ಆಲೋಚಿಸುತ್ತಿರುವುದು ಕಂಡುಬಂದಿದೆ.

ADVERTISEMENT

ಇಂದಿರಾ ಕಾಂಗ್ರೆಸ್ ಅಧ್ಯಕ್ಷರಾಗಿಜಗಜೀವನರಾಂ ಒಮ್ಮತದ ಆಯ್ಕೆ ಖಚಿತ

ನವದೆಹಲಿ, ಡಿ. 1– ಕೇಂದ್ರ ಆಹಾರ ಸಚಿವ ಜಗಜೀವನರಾಂ ಅವರು ಪ್ರಧಾನಿ ಇಂದಿರಾ ಗಾಂಧಿ ನಾಯಕತ್ವದಲ್ಲಿರುವ ಆಡಳಿತಾರೂಢ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗುವುದು ಖಚಿತ.

ನಾಮಕರಣ ಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದುಜಗಜೀವನರಾಂರವರ ನಾಮಪತ್ರ ಮಾತ್ರ ಸಲ್ಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.