ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ| ಶನಿವಾರ, 2-12-1972

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 19:30 IST
Last Updated 1 ಡಿಸೆಂಬರ್ 2022, 19:30 IST
   

ಭಾರತ– ಪಾಕ್‌ಗಳಿಂದ ಯುದ್ಧ ಕೈದಿಗಳು ಸ್ವದೇಶಗಳಿಗೆ ವಾಪಸ್

ಅಮೃತಸರ, ಡಿ. 1– ಕಳೆದ ವರ್ಷ ಡಿಸೆಂಬರ್ ಸಮರದಲ್ಲಿ ಸೆರೆಹಿಡಿಯಲಾದ ಯುದ್ಧ ಬಂದಿಗಳನ್ನು ಇಂದು ಭಾರತ– ಪಾಕಿಸ್ತಾನ ವಾಘಾ ಗಡಿ ಮೂಲಕ ಸ್ವದೇಶಕ್ಕೆ ವಾಪಸು ಕಳುಹಿಸಿದವು.

ಸುಮಾರು 540 ಪಾಕಿಸ್ತಾನಿ ಯುದ್ಧ ಬಂದಿಗಳನ್ನು 19 ತಂಡಗಳಲ್ಲಿ ಭಾರತ ಪಾಕಿಸ್ತಾನದ ವಶಕ್ಕೊಪ್ಪಿಸಿತು. ಪಾಕಿಸ್ತಾನ 616 ಮಂದಿ ಭಾರತೀಯ ಯೋಧರನ್ನು ಭಾರತದ ವಶಕ್ಕೊಪ್ಪಿಸಿತು.

ADVERTISEMENT

ಭೂಸುಧಾರಣೆ ಮಸೂದೆ: ವಿಧಾನಮಂಡಲಕ್ಕೆ ಪರಮಾಧಿಕಾರ– ಕಂದಾಯ ಸಚಿವರ ಸ್ಪಷ್ಟನೆ

ಬೆಂಗಳೂರು, ಡಿ.1– ಭೂಸುಧಾರಣೆ ಮಸೂದೆ ವಿರುದ್ಧ ಕಾಂಗ್ರೆಸ್ ಪಕ್ಷದ ಕೆಲವು ಸಿರಿವಂತ ಜಮೀನ್ದಾರರು ಚಳವಳಿ ಮಾರ್ಗ ಅನುಸರಿಸುತ್ತಿರುವರೆಂಬ ವಿಚಾರ ಸರ್ಕಾರಕ್ಕೆ ಅಧಿಕೃತವಾಗಿ ತಿಳಿದು ಬಂದಿಲ್ಲವೆಂದೂ ಮಸೂದೆಯ ಬಗ್ಗೆ ತೀರ್ಮಾನ ತೆಗೆದು ಕೊಳ್ಳುವ ಪರಮಾಧಿಕಾರ ಕೇವಲ ವಿಧಾನ ಮಂಡಲಕ್ಕೆ ಮಾತ್ರ ಇದೆಯೆಂದೂ ಕಂದಾಯ ಸಚಿವ ಶ್ರೀ ಎನ್. ಹುಚ್ಚಮಾಸ್ತಿಗೌಡ ಅವರು ಇಂದು ವಿಧಾನಸಭೆಯಲ್ಲಿ ತಿಳಿಸಿದರು.

ಶ್ರೀ ಎಚ್‌.ಕೆ. ವೀರಣ್ಣಗೌಡ ಅವರಂತಹ ಕಾಂಗ್ರೆಸ್ ನಾಯಕರು ದೊಡ್ಡ ಪ್ರಚಾರ ಮಾಡುತ್ತಿರುವುದು ಗಮನಕ್ಕೆ ಬಂದಿದೆಯೆಂದು ಶ್ರೀ ಎಂ.ಎಸ್. ಕೃಷ್ಣನ್ ಅವರು ಕೇಳಿದಾಗ ಸಚಿವರು ತಾವೂ ಅದನ್ನು ಪತ್ರಿಕೆಗಳಲ್ಲಿ ನೋಡಿರುವುದಾಗಿಯೂ ಪತ್ರಿಕೆಗಳಲ್ಲಿ ಬಂದದ್ದೆಲ್ಲವನ್ನೂ ಗಣನೆಗೆ ತೆಗೆದುಕೊಂಡರೆ ಕಷ್ಟವಾಗುವುದೆಂದೂ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.