ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ‌ | ಗುರುವಾರ, 25–1–1973

​ಪ್ರಜಾವಾಣಿ ವಾರ್ತೆ
Published 24 ಜನವರಿ 2023, 19:30 IST
Last Updated 24 ಜನವರಿ 2023, 19:30 IST
   

ವಿಯೆಟ್ನಾಂನಲ್ಲಿ ಫಿರಂಗಿಗಳು ಶನಿವಾರ ಮಧ್ಯರಾತ್ರಿಯಿಂದ ಸ್ತಬ್ಧ

ಸೈಗಾನ್‌, ಜ. 24– ಕಳೆದ 12 ವರ್ಷಗಳಿಂದ ನಡೆಯುತ್ತಿರುವ ವಿಯೆಟ್ನಾಂ ಯುದ್ಧ ಭಾರತೀಯ ಕಾಲಮಾನ ಭಾನುವಾರ ಬೆಳಿಗ್ಗೆ (ಜಿ.ಎಂ.ಟಿ. ವೇಳೆ ಶನಿವಾರ ಮಧ್ಯರಾತ್ರಿ) ನಿಲ್ಲುತ್ತದೆ.

ಸುಮಾರು 10 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿರುವ ವಿಯೆಟ್ನಾಂನಲ್ಲಿ ಆರ್ಭಟಿಸುತ್ತಿದ್ದ ಯುದ್ಧ ಫಿರಂಗಿಗಳು ಶನಿವಾರ ಮಧ್ಯರಾತ್ರಿ ಮೌನವಾಗುವುವೆಂದು ಇಂದು ವಾಷಿಂಗ್ಟನ್‌, ಹಾನಾಯ್‌ ಮತ್ತು ಸೈಗಾನ್‌ನಲ್ಲಿ ಏಕಕಾಲದಲ್ಲಿ ಹೊರಡಿಸಲಾದ ಪ್ರಕಟಣೆಗಳು ತಿಳಿಸಿವೆ.

ADVERTISEMENT

‌ನಾಟಕಕಾರ ಗಿರೀಶ್‌ ಕಾರ್ನಾಡ್‌ಗೆ ಅಕಾಡೆಮಿ ಪ್ರಶಸ್ತಿ

ನವದೆಹಲಿ, ಜ. 24– ಸಂಗೀತ, ನೃತ್ಯ ಮತ್ತು ನಾಟಕ ಕ್ಷೇತ್ರಗಳಲ್ಲಿ ಗಣನೀಯ ಸೇವೆಗಾಗಿ 1972ರ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾದ ಒಟ್ಟು 12 ಮಂದಿ ಉನ್ನತ ಕಲಾವಿದರಲ್ಲಿ ಕನ್ನಡ ನಾಟಕಕಾರ ಗಿರೀಶ್‌ ಕಾರ್ನಾಡ್‌ ಅವರೂ ಸೇರಿದ್ದಾರೆ. ಕರ್ನಾಟಕದ ಹಾಡುಗಾರಿಕೆಯಲ್ಲಿ ಟಿ. ಮುಕ್ತಾರರವರಿಗೆ ಈ ಬಾರಿಯ ಪ್ರಶಸ್ತಿ ಲಭ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.