ADVERTISEMENT

50 ವರ್ಷಗಳ ಹಿಂದೆ| ಶನಿವಾರ 9–9–1972

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 19:30 IST
Last Updated 8 ಸೆಪ್ಟೆಂಬರ್ 2022, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬಂಡೀಪುರ ಅರಣ್ಯದಲ್ಲಿ ಹುಲಿ ಸಂತತಿ ರಕ್ಷಣೆಗೆ ವಿಶೇಷ ಯೋಜನೆ

ನವದೆಹಲಿ, ಸೆ. 8– ಭಾರತದಲ್ಲಿ ಹುಲಿಗಳ ಸಂತತಿಯನ್ನು ರಕ್ಷಿಸುವ ಸಲುವಾಗಿ ಬರುವ ವರ್ಷ ಏಪ್ರಿಲ್‌ನಿಂದ ಐದು ಕೋಟಿ ಎಂಬತ್ತು ಲಕ್ಷದ ಯೋಜನೆಯೊಂದನ್ನು
ಕೈಗೊಳ್ಳಲಾಗುವುದು.

ಈ ಯೋಜನೆಯನ್ವಯ ಹುಲಿ ಸಂತಾನಭಿವೃದ್ಧಿ ಕಾರ್ಯಕ್ಕಾಗಿ ಮೈಸೂರು ರಾಜ್ಯದಲ್ಲಿರುವ ಬಂಡೀಪುರ ಅಭಯಾರಣ್ಯ ವನ್ನು ಆಯ್ಕೆ ಮಾಡಲಾಗಿದೆ. ವಿವಿಧ ರಾಜ್ಯ ಗಳಿಗೆ ಸೇರಿದ ಇನ್ನೂ ಏಳು ಅಭಯಾರಣ್ಯ
ಗಳಲ್ಲಿ ಹುಲಿ ಸಂತಾನಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಲಾಗುವುದು.

ADVERTISEMENT

ಕಳೆದ ಶತಮಾನದಲ್ಲಿ ಭಾರತದ ಅರಣ್ಯಗಳಲ್ಲಿ ಸುಮಾರು ನಲವತ್ತು ಸಾವಿರ ಹುಲಿ ಗಳಿದ್ದವು. ಆದರೆ, ಇದು ಇತ್ತೀಚಿನ ಹುಲಿ ಗಣತಿ ಪ್ರಕಾರ 1,827ಕ್ಕೆ ಕುಸಿದಿದೆ. ಹುಲಿ ರಕ್ಷಣೆ ಯೋಜನೆ ಕೈಗೊಳ್ಳಲು ಇದೇ ಕಾರಣ.

ಬಿಹಾರದ ಅನೇಕ ಕಡೆ ಗಲಭೆ: ಸೇನೆ ನೆರವಿಗೆ ಕರೆ

ಪಟ್ನಾ, ಸೆ.8– ಬಿಹಾರದ ವಿದ್ಯಾರ್ಥಿ ಚಳವಳಿಯ ನಾಲ್ಕನೆಯ ದಿನವಾದ ಇಂದು ಹಿಂಸಾತ್ಮಕ ಗಲಭೆಗಳು ರಾಜ್ಯದ ಇತರ ಭಾಗಗಳಿಗೂ ಹಬ್ಬದಂತೆ ಸರ್ಕಾರದ ಕಾಯ್ದೆ ಸುವ್ಯವಸ್ಥೆ ಪಾಲನೆಗಾಗಿ ಒಂದು ಬೆಟಾಲಿಯನ್‌ ಸೇನೆಯ ನೆರವಿಗೆ ಸರ್ಕಾರ ಕೋರಿಕೆ ಸಲ್ಲಿಸಿತು.

15 ಬೆಟಾಲಿಯನ್‌ ಗಡಿ ಭದ್ರತಾ ಸೇನೆಯನ್ನೂ ಜೊತೆಗೆ ಒಡಿಶಾ, ಉತ್ತರ ಪ್ರದೇಶದಿಂದ 2 ಬೆಟಾಲಿಯನ್‌ ಮೀಸಲು ಪೊಲೀಸರ ಸೇನೆಯನ್ನೂ ಎರವಲು ನೀಡುವಂತೆ ಬಿಹಾರ ಸರ್ಕಾರ ಕೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.