ವಿಜಾಪುರ, ಮೇ 27– ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಬರುವ ಆಲಮಟ್ಟಿ
ಅಣೆಕಟ್ಟೆಯಲ್ಲಿ 519.6 ಮೀಟರ್‌ವರೆಗೆ ನೀರು ಸಂಗ್ರಹಿಸಲು ರಾಜ್ಯಕ್ಕೆ ಸುಪ್ರೀಂ ಕೋರ್ಟ್ ಈಚೆಗೆ ಅವಕಾಶ ಕಲ್ಪಿಸಿದ ಬಳಿಕ, ಇದಕ್ಕೆ ಸಂಬಂಧಿಸಿದ ಪುನರ್‌ವಸತಿ ಕಾರ್ಯಗಳು ಭರದಿಂದ ಮುಂದುವರಿದಿವೆ.
ವಿಶ್ವದಲ್ಲೇ ಅತಿ ದೊಡ್ಡದು ಎನಿಸಿರುವ, ಸುಮಾರು 20 ಲಕ್ಷ ಜನರಿಗೆ ಪುನರ್‌ವಸತಿ ಕಲ್ಪಿಸುವ ಚೀನಾದ ಯೋಜನೆಯೊಂದರ ಬಳಿಕ, ಕರ್ನಾಟಕದ ಈ ಕೃಷ್ಣಾ ಮೇಲ್ದಂಡೆ ಯೋಜನೆ ಎರಡನೇ ಅತಿದೊಡ್ಡ ಪುನರ್‌ವಸತಿ ಯೋಜನೆ ಎನಿಸಿದೆ. ಈ ಯೋಜನೆ ಪೂರ್ಣಗೊಂಡಾಗ ಒಟ್ಟಾರೆ ಸುಮಾರು 4 ಲಕ್ಷ ಮಂದಿ ಪುನರ್‌ವಸತಿ ಹೊಂದಬೇಕಿದೆ.
ಮೈಸೂರು, ಮೇ 27– ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದ್ದರೂ ಮಂಡ್ಯದ ರೈತರ ಹಿತ ಕಾಪಾಡಲು ಕೆಆರ್‌ಎಸ್ ಅಣೆಕಟ್ಟಿನಿಂದ ನಾಲೆಗಳಿಗೆ ಬಿಟ್ಟಿರುವ ಕಾವೇರಿ ನೀರನ್ನು ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿ ಬಿಜೆಪಿ ಕರೆ ನೀಡಿದ್ದ ‘ಮೈಸೂರು ಬಂದ್’ ಬಹುತೇಕ ಯಶಸ್ವಿಯಾಯಿತು.
ಕುಡಿಯುವ ನೀರಿನ ಅಭಾವದ ಬಿಸಿ ತಟ್ಟಿರುವ ಸಾರ್ವಜನಿಕರು ಸ್ವಪ್ರೇರಣೆಯಿಂದ ಈ ಬಂದ್ ಯಶಸ್ವಿಯಾಗಲು ಸಹಕರಿಸಿದರು. ಒಂದೆರಡು ಸಣ್ಣಪುಟ್ಟ ಘಟನೆಗಳನ್ನು ಬಿಟ್ಟರೆ ಬಂದ್ ಶಾಂತಿಯುತವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.