ನವದೆಹಲಿ, ಮೇ 31– ಕೃಷ್ಣಾ ಮೇಲ್ದಂಡೆಯ ಎರಡನೇ ಹಂತದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಇಂದು ತಾಂತ್ರಿಕ ಮತ್ತು ಆರ್ಥಿಕ ಅನುಮತಿಯನ್ನು ನೀಡಿತು.
ಇಲ್ಲಿ ಇಂದು ಸೇರಿದ ಉನ್ನತಮಟ್ಟದ ಸಭೆಯಲ್ಲಿ ನಡೆದ ಚರ್ಚೆಯ ನಂತರ ಆಲಮಟ್ಟಿ ಬಲದಂಡೆ ಕಾಲುವೆ (130 ಕಿ.ಮೀ. ಉದ್ದ). ಆಲಮಟ್ಟಿ ಎಡದಂಡೆ ಕಾಲುವೆ (77 ಕಿ.ಮೀ. ನಿಂದ 103 ಕಿ.ಮೀ) ಮುಳವಾಡ ಏತ ನೀರಾವರಿ ಕಾಲುವೆ (100 ಕಿ.ಮೀ.) ಹಾಗೂ ನಾರಾಯಣಪುರ ಬಲದಂಡೆ ಕಾಲುವೆಗೆ (96 ಕಿ.ಮೀ.) ತಾಂತ್ರಿಕ ಮತ್ತು ಆರ್ಥಿಕ ಅನುಮತಿಯನ್ನು ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.