ADVERTISEMENT

50 ವರ್ಷಗಳ ಹಿಂದೆ: ಶುಕ್ರವಾರ, ಮೇ 26, 1972

​ಪ್ರಜಾವಾಣಿ ವಾರ್ತೆ
Published 25 ಮೇ 2022, 19:30 IST
Last Updated 25 ಮೇ 2022, 19:30 IST
   

ದುರುದ್ದೇಶ, ಭ್ರಷ್ಟಾಚಾರಕ್ಕಾಗಿ ಮತ್ತೆ 9 ಜನ ಎಂಜಿನಿಯರುಗಳು ಸಸ್ಪೆಂಡ್‌
ಬೆಂಗಳೂರು, ಮೇ 25–
ದುರುದ್ದೇಶ ಹಾಗೂ ಭ್ರಷ್ಟಾಚಾರದ ಆರೋಪದ ಮೇಲೆ ಒಂಬತ್ತು ಮಂದಿ ಎಂಜಿನಿಯರುಗಳನ್ನು ಇತ್ತೀಚಿಗೆ ಸಸ್ಪೆಂಡ್‌ ಮಾಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಶ್ರೀ ಎಚ್‌.ಎಂ.ಚೆನ್ನಬಸಪ್ಪ ಅವರು ಇಂದು ಪತ್ರಿಕಾ ವರದಿಗಾರರಿಗೆ ತಿಳಿಸಿದರು.

ಶರಾವತಿ ಬಳಿ ಅಣುವಿದ್ಯುತ್‌ಕೇಂದ್ರ ಸಂಭವ
ಬೆಂಗಳೂರು, ಮೇ 25–
ಅಣುಶಕ್ತಿ ಆಯೋಗವು ರಾಜ್ಯದಲ್ಲಿ ಅಣು ವಿದ್ಯುತ್‌ ಉತ್ಪಾದನಾ ಘಟಕವೊಂದನ್ನು ಸ್ಥಾಪಿಸುವ ನಿರೀಕ್ಷೆ ಇದೆ ಎಂದು ಲೋಕೊಪಯೋಗಿ ಸಚಿವ ಶ್ರೀ ಎಚ್.ಎಂ. ಚೆನ್ನಬಸಪ್ಪ ಅವರು ಇಂದು ಪತ್ರಿಕಾ ಪ್ರತಿನಿಧಿಗೆ ತಿಳಿಸಿದರು.

ಘಟಕವನ್ನು ಸ್ಥಾಪಿಸಲು ಶರಾವತಿ ಪ್ರದೇಶ ಅತ್ಯುತ್ತಮವಾಗಿದೆ ಎಂದು ಸಚಿವರು ಹೇಳಿದರು.

ADVERTISEMENT

ಆಯೋಗದ ಅಧಿಕಾರಿಗಳು ಅನೇಕ ಪ್ರದೇಶಗಳಿಗೆ ಭೇಟಿ ಇತ್ತಿದ್ದರೆಂದೂ, ಘಟಕವನ್ನು ಸ್ಥಾಪಿಸಲು ಬೇಕಾಗುವ ಎಲ್ಲ ಸೌಲಭ್ಯಗಳು ಶರಾವತಿಯಲ್ಲಿವೆ ಎಂದೂ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.