ADVERTISEMENT

50 ವರ್ಷಗಳ ಹಿಂದೆ: ಬುಧವಾರ, ಮೇ 24, 1972

​ಪ್ರಜಾವಾಣಿ ವಾರ್ತೆ
Published 23 ಮೇ 2022, 19:30 IST
Last Updated 23 ಮೇ 2022, 19:30 IST
   

ಉದ್ಯೋಗಾವಕಾಶ: ರಾಜ್ಯಗಳಿಗೆ ಕೇಂದ್ರದ ಹೆಚ್ಚುವರಿ ನೆರವು
ನವದೆಹಲಿ, ಮೇ 23–
ವಿಶೇಷ ಉದ್ಯೋಗ ಕಾರ್ಯಕ್ರಮಗಳಿಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಉಳಿಸಲು ರಾಜ್ಯ ಸರ್ಕಾರಗಳಿಗೆ ಕೇಂದ್ರವು ₹ 26.5 ಕೋಟಿ ಹೆಚ್ಚುವರಿ ನೆರವನ್ನು ನೀಡಿದೆ. ಕೇಂದ್ರಾಡಳಿತ ಪ್ರದೇಶಗಳಿಗೆ ಇದೇ ಉದ್ದೇಶಕ್ಕೆಂದು ₹50 ಲಕ್ಷ ಹೆಚ್ಚುವರಿ ನೆರವನ್ನು ನೀಡಲಾಗಿದೆ.

ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಯೋಜನಾ ಆಯೋಗ ಬರೆದಿರುವ ಪತ್ರದಲ್ಲಿ ಇಂತಹ ವಿಶೇಷ ಯೋಜನೆಗಳಿಗೆ ರಾಜ್ಯ ಸರ್ಕಾರಗಳೂ ಕೊನೆಯಪಕ್ಷ ಇಷ್ಟೇ ಪ್ರಮಾಣದ ಹೆಚ್ಚುವರಿ ಸಂಪನ್ಮೂಲಗಳನ್ನು ಸಂಗ್ರಹಿಸಬೇಕೆಂದು ಹೇಳಿದೆ.

ರಾಜ್ಯದ 3 ಖಾಸಗಿ ಮೆಡಿಕಲ್‌ ಕಾಲೇಜುಗಳ ಆಡಳಿತ ಮಂಡಳಿಪುನರ್‌ ರಚನೆಗೆ ಸರ್ಕಾರ ಸೂಚನೆ
ಬೆಂಗಳೂರು, ಮೇ 23–
ಮಣಿಪಾಲ, ಬೆಳಗಾವಿ ಮತ್ತು ಕಲ್ಬುರ್ಗಿಯಲ್ಲಿರುವ ಖಾಸಗಿ ಮೆಡಿಕಲ್‌ ಕಾಲೇಜುಗಳ ಆಡಳಿತ ಮಂಡಳಿಗಳನ್ನು ಸರ್ಕಾರಿ ನಿಯಂತ್ರಣಕ್ಕೆ ಅವಕಾಶವಾಗುವಂತೆ ಪುನರ್‌ ರಚಿಸಲು, ಆರೋಗ್ಯ ಇಲಾಖೆ ಈ ಕಾಲೇಜುಗಳ ಈಗಿನ ಸಂಚಾಲಕರಿಗೆ ಸೂಚಿಸಿದೆ.

ADVERTISEMENT

ಈ ಸೂಚನೆಯ ಪ್ರಕಾರ ಹೊಸ ಆಡಳಿತ ಮಂಡಳಿಯಲ್ಲಿ ಏಳು ಮಂದಿ ಸದಸ್ಯರಿದ್ದು, ಅವರ ಪೈಕಿ 4 ಮಂದಿ ಸರ್ಕಾರದಿಂದ ಸೂಚಿಸಲ್ಪಡುವವರಾಗಿರುವರು. ಸರ್ಕಾರ ಸೂಚಿಸಿದ ಪ್ರತಿನಿಧಿಯು ಮಂಡಳಿಯ ಅಧ್ಯಕ್ಷರಾಗಿರುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.