ADVERTISEMENT

75 ವರ್ಷಗಳ ಹಿಂದೆ: ಕಾಶ್ಮೀರದಲ್ಲಿ ಜನಮತಗಣನೆ: ಮುಸ್ಲಿಂ ಲೀಗ್ ನಿರ್ಣಯ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 0:12 IST
Last Updated 9 ಅಕ್ಟೋಬರ್ 2025, 0:12 IST
   

ಜೋಗೇಂದ್ರನಾಥ ಮಂಡಲ್‌ ರಾಜೀನಾಮೆ

ಕಲಕತ್ತೆ, ಅ. 8– ಪಾಕೀಸ್ತಾನದ ನ್ಯಾಯಾಂಗ ಮತ್ತು ಕಾರ್ಮಿಕ ಶಾಖಾ ಸಚಿವ ಶ್ರೀ ಜೋಗೇಂದ್ರನಾಥ ಮಂಡಲ್‌ ಅವರು ಇಂದು ತಮ್ಮ ಪದವಿಗೆ ರಾಜೀನಾಮೆ ಇತ್ತರು.

ಪಾಕೀಸ್ತಾನದಲ್ಲಿರುವ ಅಲ್ಪಸಂಖ್ಯಾತರ ಸ್ಥಿತಿಗತಿಗಳ ಬಗ್ಗೆ ವಿಷಾದ ವ್ಯಕ್ತಪಡಿಸಿ ಇವರು 8000 ಪದಗಳ ಪತ್ರವೊಂದನ್ನು ಪಾಕಿಸ್ತಾನ್‌ ಪ್ರಧಾನಿಗಳಿಗೆ ಬರೆದು ರಾಜೀನಾಮೆಗೆ ಕಾರಣಗಳನ್ನು ಸೂಚಿಸಿದ್ದಾರೆ.

ಕಾಶ್ಮೀರದಲ್ಲಿ ಜನಮತಗಣನೆ: ಮುಸ್ಲಿಂ ಲೀಗ್ ನಿರ್ಣಯ

ಕರಾಚಿ, ಅ. 8– ಕಾಶ್ಮೀರದಲ್ಲಿ ಆದಷ್ಟು ಬೇಗ ಜನಮತಗಣನೆ ಏರ್ಪಡಿಸುವಂತೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯನ್ನು ಒತ್ತಾಯಿಸುವ, ಮುಸ್ಲಿಂ ಕಾರ್ಯ ಸಮಿತಿಯ ನಿನ್ನೆ ರಾತ್ರಿಯ ನಿರ್ಣಯವನ್ನು ಜನರಲ್ ಕೌನ್ಸಿಲ್ ಇಂದು ಅಂಗೀಕರಿಸಿತು.

ADVERTISEMENT

ಭದ್ರತಾ ಸಮಿತಿಗೆ ಮಧ್ಯಸ್ಥಿಕೆಗಾರ ಸರ್‌ ಓವೆನ್‌ ಡಿಕನ್ಸ್‌ ಒಪ್ಪಿಸಿರುವ ವರದಿಯನ್ನು ನಿರ್ಣಯದಲ್ಲಿ ಖಂಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.