ADVERTISEMENT

25 ವರ್ಷಗಳ ಹಿಂದೆ: ಭಾನುವಾರ 2–3–1997

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2022, 22:30 IST
Last Updated 1 ಮಾರ್ಚ್ 2022, 22:30 IST
   

ಗೈರುಹಾಜರಿ: 21 ಎಂಜಿನಿಯರ್‌ಗಳ ಸಸ್ಪೆಂಡ್‌

ಬೆಂಗಳೂರು, ಮಾ. 1– ವರ್ಗಾವಣೆ ಆದ ಸ್ಥಳಗಳಲ್ಲಿ ಕರ್ತವ್ಯಕ್ಕೆ ಹಾಜರಾಗುವ ನೀರಾವರಿ ಇಲಾಖೆಯ ಇಬ್ಬರು ಕಾರ್ಯನಿರ್ವಾಹಕ ಎಂಜಿನಿಯರುಗಳು ಸೇರಿದಂತೆ ಇಪ್ಪತ್ತೊಂದು ಎಂಜಿನಿಯರ್‌ಗಳನ್ನು ಅಮಾನತ್ತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಈ ಎಂಜಿನಿಯರ್‌ಗಳು ವರ್ಗಾವಣೆಯಾದ ಸ್ಥಳಗಳಲ್ಲಿ ಸೇವೆಗೆ ಹಾಜರಾಗದಿರುವುದರಿಂದ ನೀರಾವರಿ ಯೋಜನೆಗಳ ಕಾಮಗಾರಿ ಕೆಲಸ ಹಾಗೂ ಕಚೇರಿಗಳ ದೈನಂದಿನ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೆ ಎಂದು ನೋಟಿಸ್‌ ನೀಡಿದರೂ ಹಾಜರಾಗದಿದ್ದರಿಂದ ಶಿಸ್ತಿನ ಕ್ರಮವಾಗಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಭಾರಿ ನೀರಾವರಿ ಸಚಿವ ಕೆ.ಎನ್. ನಾಗೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಇರಾನ್ ಭೂಕಂಪ 500 ಬಲಿ

ಟೆಹರಾನ್, ಮಾ. 1– ಇರಾನ್‌ನ ವಾಯವ್ಯ ಭಾಗಗಳಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಭೂಕಂಪದಲ್ಲಿ ಸುಮಾರು 500 ಮಂದಿ ಸತ್ತಿದ್ದಾರೆ. ಕನಿಷ್ಠ 2,000 ಮಂದಿಗೆ ಗಾಯಗಳಾಗಿವೆ. 52 ಹಳ್ಳಿಗಳಿಗೆ ತೀವ್ರ ಹಾನಿಯಾಗಿದೆ. 1,000 ಹಸುಗಳು ಅಸುನೀಗಿವೆ.

ನಿನ್ನೆ ಇಲ್ಲಿನ ಕೆಲವು ಭಾಗಗಳಲ್ಲಿ ವಿಪರೀತ ಹಿಮಪಾತ ಹಾಗೂ ಉಷ್ಣಾಂಶ ತೀರ ಕಡಿಮೆಯಿದ್ದ ಕಾರಣ ರಕ್ಷಣಾ ಕಾರ್ಯ ಹಾಗೂ ವೈದ್ಯಕೀಯ ಸೌಲಭ್ಯ ಒದಗಿಸುವಲ್ಲಿ ಸ್ವಲ್ಪ ವಿಳಂಬವಾದರೂ ಇಂದು ರಕ್ಷಣಾ ಕಾರ್ಯ ಭರದಿಂದಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.