ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಸೋಮವಾರ 15–7–1996

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 19:30 IST
Last Updated 14 ಜುಲೈ 2021, 19:30 IST
   

‘ಪರಿಹಾರ ಪಡೆಯದೆ ಹೋಗುವುದಿಲ್ಲ’– ಪಾಠಕ್

ಮುಂಬೈ, ಜುಲೈ 14 (ಪಿಟಿಐ)– ವಿವಾದಾತ್ಮಕ ಸಾಧು ಚಂದ್ರಾಸ್ವಾಮಿ ಅವರು ತಮಗೆ ಒಂದು ಲಕ್ಷ ಡಾಲರ್ ವಂಚಿಸಿರುವುದಾಗಿ ಆರೋಪಿಸಿರುವ ಭಾರತೀಯ ಲಕ್ಕೂಭಾಯಿ ಪಾಠಕ್ ಅವರು ಇಲ್ಲಿಯೇ ಇದ್ದು ಕೊನೆಯವರೆಗೆ ತಮ್ಮ ಹೋರಾಟ ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಚಂದ್ರಾಸ್ವಾಮಿ ಅವರು ಹತ್ತು ಲಕ್ಷ ಪೌಂಡ್ ಪಾವತಿ ಮಾಡುವಂತೆ ನ್ಯಾಯಾಲಯದ ಮೂಲಕ ಹೋರಾಟ ನಡೆಸುವುದಾಗಿ ಅವರು ತಿಳಿಸಿದ್ದಾರೆ.

ADVERTISEMENT

‘ಚಂದ್ರಾಸ್ವಾಮಿ ಅವರು ನನಗೆ ಒಂದು ಲಕ್ಷ ಡಾಲರ್ ವಂಚಿಸಿದ್ದಾರೆ. ಪಿ.ವಿ. ನರಸಿಂಹ ರಾವ್ ಅವರನ್ನು ಇದರಲ್ಲಿ ಷಾಮೀಲು
ಗೊಳಿಸಿದ್ದಾರೆ’ ಎಂದು 71ರ ಹರೆಯದ ಪಾಠಕ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.