ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಸೋಮವಾರ 10.1.1972

​ಪ್ರಜಾವಾಣಿ ವಾರ್ತೆ
Published 9 ಜನವರಿ 2022, 19:30 IST
Last Updated 9 ಜನವರಿ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನೆರವು ಸ್ವೀಕಾರದ ಬಗ್ಗೆ ಬಾಂಗ್ಲಾದೇಶ ಸರ್ಕಾರದ ಎಚ್ಚರಯುಕ್ತ ಧೋರಣೆ

ನವದೆಹಲಿ, ಜ. 9– ತಮ್ಮ ಸರ್ಕಾರವು ನೆರವಿಗಾಗಿ ಭಿಕ್ಷೆ ಬೇಡದೆಂದೂ ಸಮರತಪ್ತ ದೇಶದ ಪುನರ್‌ ನಿರ್ಮಾಣ ಕಾರ್ಯಕ್ಕೆ ಮಿತ್ರ ರಾಷ್ಟ್ರಗಳಿಂದ ನೆರವು ಪಡೆಯುವುದೆಂದೂ ಬಾಂಗ್ಲಾದೇಶದ ವಿದೇಶಾಂಗ ಸಚಿವ ಅಬ್ದುಸಮದ್‌ ಅವರು ಇಂದು ಇಲ್ಲಿ ಹೇಳಿದರು.

‘ಭಿಕ್ಷುಕರಿಗೆ ಏನುಬೇಕೆಂದು ಕೇಳುವ ಹಕ್ಕಿಲ್ಲ’ವೆಂಬ ಗಾದೆಯನ್ನು ಪ್ರಸ್ತಾಪಿಸುತ್ತ ‘ನಮ್ಮ ವಿಷಯದಲ್ಲಿ ಪರಿಸ್ಥಿತಿ ಸ್ವಲ್ಪ ಬೇರೆ ರೀತಿಯದು, ನಮಗೆ ಏನು ಬೇಕೆಂದು ಕೇಳುವ ಹಕ್ಕು ನಮಗಿದೆ. ನಮ್ಮ ಮಿತ್ರರು ಯಾರು, ಶತ್ರುಗಳು ಯಾರು ಎಂಬುದು ವಿಮೋಚನಾ ಸಮರದ ಕಾಲದಲ್ಲಿ ತಿಳಿದುಬಂದಿತು. ಮಿತ್ರರೊಬ್ಬರು ಒಂದು ಲೋಟ ನೀರು ಕೊಟ್ಟರೆ ಯಾವ ಯೋಚನೆಯೂ ಇಲ್ಲದೆ ಅದನ್ನು ಸ್ವೀಕರಿಸುತ್ತೇವೆ. ಆದರೆ ಶತ್ರುವೊಬ್ಬರು ಇಲ್ಲವೆ
ಶತ್ರುವಿನ ಮಿತ್ರರೊಬ್ಬರು ನೀರು ಕೊಟ್ಟರೆ ಅದು ವಿಷವಿರಬಹುದೆಂದು ನಾನು ಶಂಕಿಸುತ್ತೇನೆ’ ಎಂದು ಸಚಿವ ಸಮದ್‌ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.