ADVERTISEMENT

75 ವರ್ಷಗಳ ಹಿಂದೆ: ಸಂಸ್ಥಾನದ ವಿರೋಧಿ ಪಕ್ಷಗಳ ಸಮ್ಮೇಳನ

ಪ್ರಜಾವಾಣಿ ವಿಶೇಷ
Published 28 ಜುಲೈ 2025, 23:47 IST
Last Updated 28 ಜುಲೈ 2025, 23:47 IST
<div class="paragraphs"><p>75 ವರ್ಷಗಳ ಹಿಂದೆ</p></div>

75 ವರ್ಷಗಳ ಹಿಂದೆ

   

ಸಂಸ್ಥಾನದ ವಿರೋಧಿ ಪಕ್ಷಗಳ ಸಮ್ಮೇಳನ

ಬೆಂಗಳೂರು, ಜುಲೈ 28– ಮೈಸೂರು ಸಂಸ್ಥಾನದ ಸೋಷಲಿಸ್ಟ್ ಪಾರ್ಟಿ ಅಧ್ಯಕ್ಷರಾದ ಸಿ.ಜಿ.ಕೆ. ರೆಡ್ಡಿಯವರು ಆಗಸ್ಟ್‌ 13ರಂದು ಬೆಂಗಳೂರಿನಲ್ಲಿ ಸಂಸ್ಥಾನದ ವಿರೋಧ ಪಕ್ಷಗಳ ಸಮ್ಮೇಳನವೊಂದನ್ನು ಕರೆದಿದ್ದಾರೆ. ಸಂಸ್ಥಾನ ಶಾಸನಸಭೆಯ ವಿರೋಧ ಪಕ್ಷದ ನಾಯಕರಾದ ಜನಾಬ್ ಮಹಮದ್ ಇಮಾಂ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸುವರು.

ಆಡಳಿತರೂಢ ಪಕ್ಷವು ಅನುಸರಿಸಬಹುದಾದ ದುರಾಚಾರಗಳನ್ನು ತಡೆಯುವ ಯಶಸ್ವಿ ಕ್ರಮಗಳ ಮೂಲಕ ಸಂಸ್ಥಾನದಲ್ಲಿ ಸ್ವತಂತ್ರ, ಸ್ವಚ್ಛ (ನ್ಯಾಯಬದ್ಧ) ಚುನಾವಣೆಗಳನ್ನು ನಡೆಸುವ ಬಗ್ಗೆ ಮಾರ್ಗಗಳನ್ನು
ಹುಡುಕುವುದಕ್ಕಾಗಿಯೇ ಸಮ್ಮೇಳನವನ್ನು ಕರೆಯಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.