ಜೋಧಪುರ, ಅ. 15– ರಾಜಸ್ಥಾನದ ಜಯಸಾಲ್ಮರ್ ಜಿಲ್ಲೆಯ (16,000 ಚದರ ಮೈಲಿಗಳು) ಮರುಭೂಮಿ ಪ್ರದೇಶದಲ್ಲಿರುವ ಬಡಜನರು ಒಂದು ಬಗೆಯ ಹುಲ್ಲನ್ನು ಆಹಾರವಾಗಿ ಉಪಯೋಗಿಸುತ್ತಿದ್ದಾರೆ.
ತೆಳುವಾಗಿ ಮುಳ್ಳಿರುವ ಈ ಹುಲ್ಲಿಗೆ ‘ಭೂರತ್’ ಎಂದು ಹೆಸರು. ಮಿಡತೆ ಹಾವಳಿಯಿಂದ ಈ ಜಿಲ್ಲೆಯಲ್ಲಿ ಧಾನ್ಯಗಳು ಸಂಪೂರ್ಣ ನಾಶವಾಗಿವೆ.
ಹುಲ್ಲು ತಿನ್ನಲು ಹೇಗೆ ಒಗ್ಗಿದೆಯೋ ತಿಳಿಯದಾದರೂ, ಕಾರಣಾಂತರ ಗಳಿಂದ ಈ ಜನಕ್ಕೆ ‘ಭೂರತಿಯಾ’ ಎಂಬ ಅಪಹಾಸ್ಯದ ಅಡ್ಡ ಹೆಸರು ಶತಮಾನಗಳಿಂದ ಅಂಟಿಕೊಂಡು ಬಂದಿದೆ. ‘ಭೂರತಿಯಾ’ ಎಂದರೆ ಹುಲ್ಲು ತಿನ್ನುವವರು ಎಂದರ್ಥ.