ADVERTISEMENT

25 ವರ್ಷಗಳ ಹಿಂದೆ: ತಲೈಮಲೈ ಕಾಡಿನಲ್ಲಿ ರಾಜ್‌ಕುಮಾರ್‌?

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 22:31 IST
Last Updated 4 ಆಗಸ್ಟ್ 2025, 22:31 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ತಲೈಮಲೈ ಕಾಡಿನಲ್ಲಿ ರಾಜ್‌ಕುಮಾರ್‌?

ತಲೈಮಲೈ (ತಮಿಳುನಾಡು), ಆಗಸ್ಟ್ 4– ವೀರಪ್ಪನ್‌ನಿಂದ ಅಪಹರಣಕ್ಕೆ ಒಳಗಾಗಿರುವ ಕನ್ನಡದ ಮೇರುನಟ ಡಾ. ರಾಜ್‌ಕುಮಾರ್‌ ಅವರು, ತಲೈಮಲೈ ಅರಣ್ಯದ ನೆಲೆಯೊಂದರಲ್ಲಿ ಇದ್ದಾರೆಂದು ಮೂಲಗಳು ತಿಳಿಸಿವೆ.

ಗಾಜನೂರಿನ ಹತ್ತಿರದಲ್ಲೇ ಇರುವ ಈ ಕಾಡಿನಲ್ಲಿ 18ನೇ ಶತಮಾನದ ಅಂತ್ಯದಲ್ಲಿ ಟಿಪ್ಪುಸುಲ್ತಾನ್ ಬೇಟೆಗೆಂದು ಕಟ್ಟಿಸಿದ್ದ ಹಳೆಯ ಮಂಟಪವೊಂದರಲ್ಲಿ ವೀರಪ್ಪನ್‌ ತಂಡ ತಂಗಿದ್ದುದನ್ನು ಮರ ಕಡಿಯಲು ಹೋದ ಕಾಡಿನ ಜನರು ನಿನ್ನೆ ಕಂಡಿದ್ದಾರೆಂದು ಹೇಳಲಾಗಿದೆ.

ADVERTISEMENT

ಕಾಶ್ಮೀರ ಹತ್ಯಾಕಾಂಡ; ವಿದೇಶಿ ಕೈವಾಡ ಸ್ಪಷ್ಟ

ನವದೆಹಲಿ, ಆಗಸ್ಟ್‌ 4– ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಹತ್ಯಾಕಾಂಡದಿಂದ ಅಲ್ಲಿ ಶಾಂತಿ ಸ್ಥಾಪಿಸುವ ಭಾರತದ ಸಂಕಲ್ಪ ಬದಲಾಗದು ಎಂದು ಲೋಕಸಭೆಯಲ್ಲಿ ಇಂದು ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಘೋಷಿಸಿದರು.

ಅಲ್ಲಿನ ಭದ್ರತಾ ಪಡೆ ಮತ್ತು ಸಾರ್ವಜನಿಕರು ನೀಡಿದ ಮಾಹಿತಿಯಿಂದ ಕೊಲೆಗಡುಕರು ವಿದೇಶಿಯರೆನ್ನುವುದು ಸ್ಪಷ್ಟವಾಗುತ್ತದೆ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.