ADVERTISEMENT

25 ವರ್ಷಗಳ ಹಿಂದೆ: ರಾಣೆಬೆನ್ನೂರು ಉದ್ರಿಕ್ತ ಗಾಳಿಯಲ್ಲಿ ಗುಂಡು

ಭಾನುವಾರ, 12 ನವೆಂಬರ್ 2000

ಪ್ರಜಾವಾಣಿ ವಿಶೇಷ
Published 11 ನವೆಂಬರ್ 2025, 19:30 IST
Last Updated 11 ನವೆಂಬರ್ 2025, 19:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ರಾಣೆಬೆನ್ನೂರು ಉದ್ರಿಕ್ತ ಗಾಳಿಯಲ್ಲಿ ಗುಂಡು

ರಾಣೆಬೆನ್ನೂರು, ನ. 11– ರಾಣೆಬೆನ್ನೂರು ಪಟ್ಟಣದ ಸ್ಮಶಾನ ಭೂಮಿಯ ಬಗ್ಗೆ ಇಲ್ಲಿನ ಎರಡು ಸಮುದಾಯಗಳ ನಡುವೆ ಇರುವ ಹಳೆಯ ವಿವಾದ ಇಂದು ಘರ್ಷಣೆಗೆ ದಾರಿ ಮಾಡಿಕೊಟ್ಟಿದ್ದು, ಸಾರ್ವಜನಿಕ ಆಸ್ತಿಪಾಸ್ತಿ ನಾಶಗೊಳಿಸಿ ಕಲ್ಲೆಸೆತದಲ್ಲಿ ತೊಡಗಿದ್ದ ಗುಂಪುಗಳನ್ನು ಚದುರಿಸಲು ಪೊಲೀಸರು, ನಾಲ್ಕು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರು.

ರಾತ್ರಿ 10 ಗಂಟೆಯಲ್ಲೂ ಉದ್ರಿಕ್ತ ಜನರು ಅಲ್ಲಲ್ಲಿ ವಾಹನಗಳು ಹಾಗೂ ಅಂಗಡಿಗಳಿಗೆ ಕಲ್ಲೆಸೆಯುತ್ತಿದ್ದರು. ಪಟ್ಟಣದಲ್ಲಿ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು, ಹಿಂಸಾಚಾರದಲ್ಲಿ ತೊಡಗಿರುವ ಜನರನ್ನು ಚದುರಿಸಿದರು.

ADVERTISEMENT

______________________________

ಆಪಾದಿತ ಕೇಂದ್ರ ಸಚಿವ ರಾಜೀನಾಮೆ

ನವದೆಹಲಿ, ನ. 11 (ಯುಎನ್‌ಐ)– ಕೊಲೆ ಆರೋಪ ಎದುರಿಸುತ್ತಿರುವ ಕೇಂದ್ರ ರಕ್ಷಣಾ ಖಾತೆಯ ರಾಜ್ಯ ಸಚಿವ ಹಿರೇನ್‌ ಪಾಠಕ್‌ ಇಂದು ರಾತ್ರಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು.

1985ರ ಮೀಸಲಾತಿ ವಿರೋಧಿ ಗಲಭೆ ಸಂದರ್ಭದಲ್ಲಿ ಹೆಡ್‌ ಕಾನ್‌ಸ್ಟೆಬಲ್‌ ಒಬ್ಬರನ್ನು ಹತ್ಯೆ ಮಾಡಿರುವ ಸಂಬಂಧ ಅಹಮದಾಬಾದ್‌ನ ಕೋರ್ಟಿನಲ್ಲಿ ಪಾಠಕ್‌ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.