ಟಿಬೆಟ್ ಜನತೆಯ ವಿರುದ್ಧ ಕತ್ತಿ ಎತ್ತಿದ್ದು ಅನ್ಯಾಯ
ನವದೆಹಲಿ, ನ. 9– ಟಿಬೆಟ್‌ನಲ್ಲಿ ಚೀಣಾ ಕೈಗೊಂಡಿರುವ ಕ್ರಮವನ್ನು ಸರದಾರ್ ವಲ್ಲಭಭಾಯ್ ಪಟೇಲರು ಇಂದು ಟೀಕಿಸಿದರು. ಪರಂಪರಾನುಗತವಾಗಿ ಶಾಂತಿಪ್ರಿಯರಾದ ಟಿಬೆಟ್ ಜನತೆಯ ವಿರುದ್ಧ ಕತ್ತಿ ಎತ್ತಿದ್ದು ಅನ್ಯಾಯವೆಂದರು.
ಮುಂದುವರಿದು, ಚೀಣಾ ಭಾರತದ ಸಲಹೆಯನ್ನು ಕೇಳಿದ್ದರೆ ಬಲಪ್ರಯೋಗ ತ್ಯಜಿಸಬಹುದಾಗಿತ್ತು ಎಂದರು. ಟಿಬೆಟ್ಟಿನಲ್ಲಿ ವಿದೇಶೀಯರ ಸಂಚು ಸಾಗಿತ್ತೆಂದು, ಚೀಣಾ ತನ್ನ ಕೃತಿ ಸಮರ್ಥನೆಗೆ ನೀಡಿರುವ ವಾದ ಆಧಾರರಹಿತವೆಂದರು.
**************
ಶ್ರೀನಗರದಲ್ಲಿ ಡಾ. ಪ್ರಸಾದ್
ಶ್ರೀನಗರ, ನ. 9– ಭಾರತ ರಾಷ್ಟ್ರಾಧ್ಯಕ್ಷ ರಾದ ಡಾ. ರಾಜೇಂದ್ರ ಪ್ರಸಾದರು ಪರಿವಾರ ಸಮೇತ ಇಂದು ಶ್ರೀನಗರಕ್ಕೆ ಆಗಮಿಸಿದರು. ಪ್ರಸಾದರು ರಾಷ್ಟ್ರಾಧ್ಯಕ್ಷರಾಗಿ ಅಧಿಕಾರ ವಹಿಸಿದ ಮೇಲೆ ಶ್ರೀನಗರಕ್ಕೆ ಭೇಟಿ ಕೊಟ್ಟುದು ಇದೇ ಮೊದಲನೆ ಸಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.