ADVERTISEMENT

ಬುಧವಾರ, 26–6–1968

​ಪ್ರಜಾವಾಣಿ ವಾರ್ತೆ
Published 25 ಜೂನ್ 2018, 20:16 IST
Last Updated 25 ಜೂನ್ 2018, 20:16 IST

ರಫ್ತು ಹೆಚ್ಚಿಸಿ, ಆಮದು ಕಡಿಮೆ ಮಾಡುವುದೊಂದೇ ಸಾಲ ತೀರಿಸಲು ಉಳಿದ ಮಾರ್ಗ

ಬೆಂಗಳೂರು, ಜೂನ್‌ 25– ‘ರಫ್ತನ್ನು ಹೆಚ್ಚಿಸಬೇಕು, ಆಮದನ್ನು ಕಡಿಮೆ ಮಾಡಬೇಕು, ಹೆಚ್ಚುತ್ತಿರುವ ಸಾಲವನ್ನು ತೀರಿಸುವ ಮಾರ್ಗವಿದೊಂದೇ’ ಎಂದು ಉಪ ಪ್ರಧಾನಿ ಹಾಗೂ ಕೇಂದ್ರದ ಅರ್ಥ ಸಚಿವರಾದ ಶ್ರೀ ಮುರಾರಜಿ ದೇಸಾಯಿಯವರು ಇಂದು ಇಲ್ಲಿ ತಿಳಿಸಿದರು.

ವಿಶ್ವದಲ್ಲಿ ಸ್ಥಿರ ಶಾಂತಿ ಸ್ಥಾಪನೆಗೆ ಹಿಂದೂ ತತ್ವ ಅಧ್ಯಯನ, ಅನುಸರಣೆ ಅಗತ್ಯ: ಮುರಾರಜಿ

ADVERTISEMENT

ಮೈಸೂರು, ಜೂನ್‌ 25– ‘ಜೀವನದಲ್ಲಿ ನಿಜವಾದ ಆನಂದವನ್ನು ಪಡೆಯಲು ಹಿಂದೂ ತತ್ವಶಾಸ್ತ್ರದ ಅಧ್ಯಯನ ಮತ್ತು ಅನುಸರಣೆ ಅತ್ಯಗತ್ಯ.

‘ಸ್ಥಿರವಾದ ಶಾಂತಿ ಭಯದಿಂದ ಬರುವುದಿಲ್ಲ. ಅಭಯವೊಂದೇ ನಿಜಶಾಂತಿಯನ್ನು ತರಬಲ್ಲದು. ಈ ವಿಷಯದಲ್ಲಿ ಹಿಂದೂ ದರ್ಶನ ಶಾಸ್ತ್ರ ನೀಡುವ ಪಾಠ ಹಿರಿದು’.

ಇಂದು ಸಂಜೆ ಇಲ್ಲಿ ಮಹಾರಾಜಾ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಹಿಂದೂ ತತ್ವಶಾಸ್ತ್ರ ಪೀಠವನ್ನು ಉದ್ಘಾಟಿಸುತ್ತ ಉಪಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಮೇಲಿನಂತೆ ತಿಳಿಸಿದರು.

1971ರ ಸೆನ್ಸಸ್‌ನಲ್ಲಿ ನಿಮಗೊಂದು ಅಪೂರ್ವ ಪ್ರಶ್ನೆ!

ನವದೆಹಲಿ, ಜೂನ್‌ 25– ಮೊಟ್ಟಮೊದಲಬಾರಿಗೆ 1971ರ ಸೆನ್ಸಸ್‌ನಲ್ಲಿ ಜನರ ಆರ್ಥಿಕ ಪರಿಸ್ಥಿತಿ ಬಗೆಗೂ ಪೂರ್ಣ ಮಾಹಿತಿ ಸಂಗ್ರಹಿಸಲಾಗುವುದು.

10 ವರ್ಷಗಳು ಭಾರತದ ರಿಜಿಸ್ಟ್ರಾರ್‌ ಜನರಲ್‌ ಆಗಿದ್ದು ನಿನ್ನೆ ಆ ಹುದ್ದೆಯಿಂದ ನಿವೃತ್ತರಾದ ಶ್ರೀ ಅಶೋಕ ಮಿತ್ರಾರವರು 1971ರ ಸೆನ್ಸಸ್‌ಗಾಗಿ ತಾವು ಪ್ರಾರಂಭಿಸಿದ ಕೆಲವು ವಿಶಿಷ್ಟ ಕ್ರಮಗಳನ್ನು ವಿವರಿಸುತ್ತ, ಕುಟುಂಬ ಯೋಜನಾ ಕಾರ್ಯಕ್ರಮದ ಸಮೀಕ್ಷೆಗಾಗಿ ಜನನ–ಮರಣ ಹಾಗೂ ಮಹಿಳೆಯರ ಗರ್ಭಧಾರಣ ಶಕ್ತಿ ಕುರಿತೂ ಅಂಕಿ– ಅಂಶ ಸಂಗ್ರಹಣೆಗೆ ಏರ್ಪಾಡಾಗಿದೆ ಎಂದರು.

ಮಾಹಿತಿ ಪರಿಷ್ಕಾರಕ್ಕಾಗಿ ಸೆನ್ಸಸ್‌ ಆಯೋಗವು ಆರು ಎಲೆಕ್ಟ್ರಾನಿಕ್‌ ಕಂಪ್ಯೂಟರ್‌ಗಳನ್ನು ಬಳಸುತ್ತದೆ. ಅದು ನಾಲ್ಕೈದು ವರ್ಷಗಳಲ್ಲಿ 1800 ಸಂಚಿಕೆಗಳ ವರದಿಯನ್ನು ತಯಾರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.