ADVERTISEMENT

50 ವರ್ಷಗಳ ಹಿಂದೆ: ಮಂಗಳವಾರ, 22. 2.1971

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 19:23 IST
Last Updated 22 ಫೆಬ್ರುವರಿ 2021, 19:23 IST
   

1970ರ ವೇತನ ಶ್ರೇಣಿಯಲ್ಲಿದ್ದ ಲೋಪ ನಿವಾರಣೆ

ಬೆಂಗಳೂರು, ಫೆ. 22– ಸರ್ಕಾರದ ವಿವಿಧ ಇಲಾಖೆಗಳ 87 ಹುದ್ದೆಗಳಿಗೆ ಸಂಬಂಧಿಸಿದಂತೆ 1970ರ ವೇತನ ಶ್ರೇಣಿಯಲ್ಲಿದ್ದ ಲೋಪಗಳನ್ನು ನಿವಾರಿಸಿ ಮೈಸೂರು ಸರ್ಕಾರವು ವಿಸ್ತೃತ ಆದೇಶವೊಂದನ್ನು ಹೊರಡಿಸಿದೆ.

ವೇತನ ವ್ಯವಸ್ಥೆಗೆ ಸಂಬಂಧಿಸಿದ ಅಧಿಕೃತ ಸಮಿತಿಯ ಶಿಫಾರಸುಗಳನ್ನು ಆಧರಿಸಿ ಹೊರಡಿಸಲಾದ ಈ ಆದೇಶದಲ್ಲಿ ನೌಕರರು ರಜೆಯ ಬದಲು ರಜೆಯ ವೇತನವನ್ನು ಪಡೆಯುವ ಕ್ರಮ, ಬಡ್ತಿ ಮತ್ತು ವೇತನ ಬಡ್ತಿ, ಕೆಲವು ವರ್ಗದವರಿಗೆ ವಿಶೇಷ ವೇತನ ಹಾಗೂ ವಿಧಾನ ಮಂಡಲದ ಸಿಬ್ಬಂದಿಗೆ ಓವರ್‌ ಟೈಂ ಭತ್ಯೆಯ ಬಗ್ಗೆ ನಿಯಮಗಳನ್ನು
ಸ್ಪಷ್ಟಪಡಿಸಲಾಗಿದೆ.

ADVERTISEMENT

ಬಂಗಾಳ ಬಂದ್‌ ‘ಶಾಂತಿಯುತ’ ಯಶಸ್ವಿ: ಜನಜೀವನ ಸ್ಥಗಿತ

ಕಲ್ಕತ್ತ, ಫೆ. 22– ಫಾರ್ವರ್ಡ್‌ ಬ್ಲಾಕ್‌ ಅಧ್ಯಕ್ಷ ಶ್ರೀ ಹೇಮಂತಕುಮಾರ ಬಸು ಅವರ ಕಗ್ಗೊಲೆ ವಿರುದ್ಧ ಪ್ರತಿಭಟಿಸಲು ಪಶ್ಚಿಮ ಬಂಗಾಳ ಇಂದು ಆಚರಿಸಿದ 24 ಗಂಟೆಗಳ ಬಂದ್‌ನಿಂದ ಜನಜೀವನ ಸ್ಥಗಿತಗೊಂಡಿತು. ಬಂದ್‌ ಹೆಚ್ಚುಕಡಿಮೆ ಶಾಂತಿಯುತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.