ADVERTISEMENT

ಅಂತೂ ಸರ್ಕಾರಕ್ಕೆ ಬುದ್ಧಿ ಬಂತು!

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2012, 19:30 IST
Last Updated 16 ಆಗಸ್ಟ್ 2012, 19:30 IST

`ಎಂಟು ವರ್ಷಕ್ಕೆ ಮಗ ದಂಟು~ ಎಂಬಂತೆ, ಅಂತೂ ಕೊನೆಗೊಮ್ಮೆ, ಸಾರ್ವಜನಿಕ ಸ್ಥಳಗಳಲ್ಲಿ `ಗಣ್ಯ~ರು, `ಗಣ್ಯರಲ್ಲದವರ~ ಪ್ರತಿಮೆ ಸ್ಥಾಪನೆಗೆ ಸರ್ಕಾರ ಕಡಿವಾಣ ಹಾಕಿರುವ `ಸುತ್ತೋಲೆ~ಯನ್ನು `ಪ್ರತಿಮೆ ಸಂಸ್ಕೃತಿ~ಯ ವಿರೋಧಿಗಳು ಖಂಡಿತ ಸ್ವಾಗತಿಸುತ್ತಾರೆ!

ಆದರೆ, ಈ ಸರ್ಕಾರಿ ಸುತ್ತೋಲೆ `ಸತ್ತೋಲೆ~ ಆಗಬಾರದು, ಅಷ್ಟೇ! ಸಮಾಜಕ್ಕೆ ಕೊಡುಗೆ ನೀಡಿದ ಗಣ್ಯರನ್ನು ಸ್ಮರಿಸಬೇಕು ನಿಜ! ಆದರೆ, ಪ್ರತಿಮೆ ಸ್ಥಾಪನೆಗಿಂತ ಅದರ ನಿರ್ವಹಣೆ, ರಕ್ಷಣೆಗೆ ಗಮನ ಕೊಡದಿದ್ದರೆ ಅದೊಂದು ರೀತಿಯ ಮುಜುಗರ, ಅವಹೇಳನ ಅನಿಸುವುದಿಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.