ADVERTISEMENT

ಅಕ್ರಮ ಹಣ ಮಾಹಿತಿ ಬಹಿರಂಗಗೊಳಿಸಿ

ಕೆ.ಎಸ್‌.ನಾಗರಾಜ
Published 23 ಏಪ್ರಿಲ್ 2014, 19:30 IST
Last Updated 23 ಏಪ್ರಿಲ್ 2014, 19:30 IST

ಚುನಾವಣೆಯ ಸಂದರ್ಭದಲ್ಲಿ ಅಕ್ರಮವಾಗಿ ಸಾಗಿಸು­ತ್ತಿದ್ದ ಲೆಕ್ಕವಿಲ್ಲದ ಹಣವನ್ನು ಜಪ್ತಿಗೊಳಿಸಿ­ರು­ವುದಾಗಿ ಪತ್ರಿಕೆಗಳಲ್ಲಿ ಮತ್ತು ವಾಹಿನಿಗಳಲ್ಲಿ ಸುದ್ಧಿ ಪ್ರಕಟವಾಗುತ್ತಲೇ ಇರುತ್ತದೆ. ಚುನಾವ­ಣೆಯ ನಂತರ ಈ ಸುದ್ದಿ ಹಾಗೆಯೇ ಸತ್ತು ಹೋಗು­­ತ್ತದೆ.

ಆದುದರಿಂದ ಚುನಾವಣೆಯ ಸಂದ­ರ್ಭದಲ್ಲಿ ವಶಪಡಿಸಿಕೊಂಡ ಅಕ್ರಮ ಹಣ ಎಷ್ಟು ಮತ್ತು ಯಾವ ಯಾವ ಪಕ್ಷಕ್ಕೆ ಸೇರಿದೆ ಮತ್ತು ಈ ಹಣವನ್ನು ಮುಂದೆ ಯಾವ ಖಾತೆಗೆ ವರ್ಗಾಯಿಸಲಾಗುತ್ತದೆ ಎನ್ನುವ ಮಾಹಿತಿ­ಯನ್ನು ಚುನಾವಣಾ ಅಯೋಗ ಪ್ರಕಟಿಸಬೇಕು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.