ADVERTISEMENT

ಅತಂತ್ರ ಅತಿಥಿ ಉಪನ್ಯಾಸಕರು

ಶಿವಕುಮಾರ್ ಎಲ್, ಹಗರಿಬೊಮ್ಮನಹಳ್ಳಿ.
Published 17 ಡಿಸೆಂಬರ್ 2012, 19:59 IST
Last Updated 17 ಡಿಸೆಂಬರ್ 2012, 19:59 IST

ಪ್ರತಿ ಶೈಕ್ಷಣಿಕ ವರ್ಷವೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹೆಚ್ಚು ಕಾರ‌್ಯಭಾರದ ಆಧಾರದ ಮೇಲೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುತ್ತದೆ. ಹೀಗೆ ಸುಮಾರು 7-8 ವರ್ಷಗಳಿಂದ ಅತಿಥಿ ಉಪನ್ಯಾಸಕರು ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಲೇ ಇದ್ದಾರೆ. ಇಂಥವರಿಗೆ ಸರ್ಕಾರ ಒಂದು ಕ್ರಮಬದ್ಧ ಸಂಭಾವನೆಯನ್ನು ನಿಗದಿಪಡಿಸದೇ ಬೇಕಾಬಿಟ್ಟಿಯಾಗಿ ಅಂದರೆ ತಿಂಗಳಿಗೆ ಕೇವಲ 8-10 ಸಾವಿರ ರೂ.ಗಳನ್ನು ಕೊಡುವುದರ ಮೂಲಕ ಅನ್ಯಾಯ ಮಾಡಲಾಗುತ್ತಿದೆ.

ದಿನಗೂಲಿ ನೌಕರರ ಸೇವೆ ಕಾಯಂ ಮಾಡಿ ನಿರ್ಧಾರ ಕೈಗೊಂಡಿರುವ ಸರ್ಕಾರ ಮಾನವೀಯತೆ ಆಧಾರದ ಮೇಲೆ ಅತಿಥಿ ಉಪನ್ಯಾಸಕರ ಸಮುದಾಯವನ್ನು ಯಾಕೆ ಕಾಯಂ ಮಾಡಬಾರದು?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.