
ಪ್ರಜಾವಾಣಿ ವಾರ್ತೆರಾಜ್ಯದ ಮಾಧ್ಯಮಿಕ ಶಾಲೆಗಳಲ್ಲಿ ಖಾಲಿ ಇರುವ ವೃತ್ತಿ ಶಿಕ್ಷಕರ ಹುದ್ದೆಗಳಾದ ಹೊಲಿಗೆ ಹಾಗೂ ತೋಟಗಾರಿಕೆ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶದಿಂದಾಗಿ 8000 ಅತಿಥಿ ಶಿಕ್ಷಕರನ್ನು ರಾಷ್ಟ್ರೀಯ ಶಿಕ್ಷಣ ಕಾಯಿದೆ ಹಾಗೂ ಸರ್ವಶಿಕ್ಷಾ ಅಭಿಯಾನ ಯೋಜನೆಯಡಿಯಲ್ಲಿ ಒಂದು ತಿಂಗಳೊಳಗಾಗಿ ನೇಮಕ ಮಾಡಿಕೊಳ್ಳಲಾಗುತ್ತದೆಂದು ರಾಜ್ಯದ ಯೋಜನಾ ನಿರ್ದೇಶಕರು ಒಂದು ತಿಂಗಳ ಹಿಂದೆ ತಿಳಿಸಿದ್ದರು.
ಆದರೆ ಇದುವರೆಗೆ ಯಾವುದೇ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಂಡಿರುವುದಿಲ್ಲ. ಆದುದರಿಂದ ಯೋಜನಾ ನಿರ್ದೇಶಕರು ಈ ಬಗ್ಗೆ ಗಮನಹರಿಸಬೇಕೆಂದು ಮನವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.