ADVERTISEMENT

ಅನುಷ್ಠಾನಗೊಳ್ಳಲಿ

ವಸಂತ ಬಿ ಈಶ್ವರಗೆರೆ
Published 7 ಫೆಬ್ರುವರಿ 2013, 19:59 IST
Last Updated 7 ಫೆಬ್ರುವರಿ 2013, 19:59 IST

1915ರಲ್ಲಿ ಬೆಂಗಳೂರಿನಲ್ಲಿ ನಡೆದ ಮೊಟ್ಟ ಮೊದಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಿಂದ ಹಿಡಿದು, ಇಲ್ಲಿಯವರೆಗೆ ಅನೇಕ ಚಿಂತಕರು ಕನ್ನಡ ಕಾಳಜಿಯ ಹಲವು ಪ್ರಶ್ನೆಗಳನ್ನ, ಸಮ್ಮೇಳನದಲ್ಲಿ ನಡೆಯುವ ಗೋಷ್ಠಿಗಳಲ್ಲಿ ಎತ್ತಿ ತೋರಿಸಿದ್ದಾರೆ. ಆದರೆ ಅವು ಸಮ್ಮೇಳನ  ದಲ್ಲಿ ಗುಂಯ್‌ಗುಟ್ಟಿ, ಮತ್ತೆ ಸ್ತಬ್ಧವಾಗಿವೆ.

ಈ ಬಾರಿ ಗಡಿ ಭಾಗವಾದ ವಿಜಾಪುರದಲ್ಲಿ  ಸಮ್ಮೇಳನ ನಡೆಯುತ್ತಿದ್ದು, ಆ ಭಾಗದ ಅನೇಕ ಕನ್ನಡ ಶಾಲೆಗಳು, ಕನ್ನಡ ಉಳಿವಿನ ಸಮಸ್ಯೆಗಳು,  ಚರ್ಚೆಯಾಗಿ ಸಾಕಾರಗೊಳ್ಳಬಹುದೆಂದು ಜನ  ಕನಸು ಕಾಣುತ್ತಿದ್ದಾರೆ. ಇದುವರೆಗೂ ನಡೆದ ಸಾಹಿತ್ಯ ಸಮ್ಮೇಳನದಲ್ಲಿ  ಮಂಡಿಸಿದ ಗೋಷ್ಠಿಗಳ ವಿಚಾರಗಳು ಜಾರಿಗೆ ಬಾರದೇ ಇದ್ದರೂ, ಈ ಬಾರಿಯಾದರೂ ಚರ್ಚೆಯಾಗುವ ವಿಷಯಗಳು, ಪುಸ್ತಕದಲ್ಲಿ ಮಾತ್ರ ಉಳಿಯದೆ, ಅನುಷ್ಠಾನಗೊಳ್ಳಲಿ.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.