ADVERTISEMENT

ಅಪಾಯಕಾರಿ ಬೆಳವಣಿಗೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2011, 19:30 IST
Last Updated 23 ಅಕ್ಟೋಬರ್ 2011, 19:30 IST

ಹಿರಿಯ ರಾಜಕಾರಣಿ, ಕಾನೂನು ತಿಳಿವಳಿಕೆ ಇರುವ, ಒಮ್ಮೆ ವಿಧಾನಸಭೆಯ ಸಭಾಧ್ಯಕ್ಷರೂ ಆಗಿದ್ದ ಸಂಸದ ಡಿ.ಬಿ. ಚಂದ್ರೇಗೌಡರು ರಾಜ್ಯಪಾಲರು ಮತ್ತು ರಾಜಭವನ ನ್ಯಾಯಾಲಯಗಳ ಮೇಲೆ ಪ್ರಭಾವ ಬೀರಿದೆ.
 
ಹೀಗಾಗಿ ರಾಜ್ಯದ ಅನೇಕ ಬಿ.ಜೆ.ಪಿ. ನಾಯಕರು ಆರೋಪಗಳನ್ನು ಹೊತ್ತು ಸೆರೆಮನೆ ಸೇರುತ್ತಿದ್ದಾರೆ ಎಂಬ ಮಾತನ್ನು ಆಡುವುದರ ಮೂಲಕ  ನ್ಯಾಯಾಲಯಗಳ, ನ್ಯಾಯಾಧೀಶರ  ನೈತಿಕತೆಯನ್ನೇ ಪ್ರಶ್ನಿಸಿದ್ದಾರೆ.

ಅವರ ಇಂತಹ ನಡವಳಿಕೆ ನಿಜಕ್ಕೂ ಅಪಾಯಕಾರಿ. ಅನ್ಯ ಪಕ್ಷದವರ ಮೇಲೆ ಆರೋಪಗಳನ್ನು ಮಾಡಿದಾಗ ನ್ಯಾಯಾಲಯ ನ್ಯಾಯ ಎತ್ತಿಹಿಡಿಯಿತು ಎಂದು ಸಂಭ್ರಮಿಸುವ ಆಡಳಿತ ಪಕ್ಷದವರು ತಮ್ಮ ಪಕ್ಷದವರ ಮೇಲೆ ಆರೋಪ ಬಂದಾಗ ಮಾತ್ರ ನ್ಯಾಯಾಲಯವೇ ಸರಿ ಇಲ್ಲ ಎನ್ನುವ ರೀತಿ ಮಾತನಾಡುವುದಾದರೆ, ತನಿಖೆಯನ್ನು ಯಾರು ಮಾಡಬೇಕು?

ಎಲ್ಲರೂ ನ್ಯಾಯಾಲಯದ ತೀರ್ಪಿಗೆ ತಲೆಬಾಗಬೇಕು. ಸಂವಿಧಾನದ ಅಡಿಯಲ್ಲಿ ಎಲ್ಲವೂ ಕಾರ್ಯನಿರ್ವಹಿಸುವುದರಿಂದ ಎಲ್ಲವನ್ನೂ ಪ್ರಶ್ನಿಸುತ್ತ ಹೋದರೆ ಅಂತ್ಯವೇ ಇರುವುದಿಲ್ಲ. ಹಿರಿಯ ರಾಜಕಾರಣಿಗಳು ಕೂಡ ಓಲೈಕೆಗಾಗಿ ಇಂತಹ ದಾರಿ ಹಿಡಿದಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.