ADVERTISEMENT

ಅಪ್ಪಣ್ಣ ಸ್ಮಾರಕಕ್ಕೆ ವಿರೋಧ ಏಕೆ?

ಸಂಗಪ್ಪ ಗಾಣಿಗೇರ, ಹುನಗುಂದ
Published 3 ಮಾರ್ಚ್ 2014, 19:30 IST
Last Updated 3 ಮಾರ್ಚ್ 2014, 19:30 IST

‘ಈ ಪೂರ್ವಗ್ರಹಗಳೇಕೆ?’  ಸಂಪಾದಕೀಯ­ದಲ್ಲಿ (ಫೆ. 26) ‘ತಂಗಡಿ’ ಎಂದು ಬರೆಯ­ಲಾ­ಗಿದೆ. ಹಿಂದಿನ ದಿನದ ವರದಿಯಲ್ಲೂ ಅದು ‘ತಂಗಡಿ’ ಎಂದಾಗಿತ್ತು. ಆದರೆ ಆ ಊರಿನ ಹೆಸರು ತಂಗಡಗಿ.

ತಂಗಡಗಿ, ಮುದ್ದೇಬಿಹಾಳ ತಾಲ್ಲೂಕಿನ ಬಾಜೂ ತಾಲ್ಲೂಕಾದ ಹುನಗುಂದ ತಾಲ್ಲೂಕಿಗೆ ಸೇರಿದೆ.  ಅಲ್ಲಿ ಬಸವಣ್ಣನವರ ಧರ್ಮಪತ್ನಿ  ನೀಲಮ್ಮ­ನವರ ಸಮಾಧಿ ಇದೆ.  ಅಲ್ಲಿಯೇ ಹಡಪದ ಅಪ್ಪಣ್ಣನ ಸಮಾಧಿಯೂ ಇದೆ.  12ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿ ಸಂದರ್ಭದಲ್ಲಿ  ನಾನಾ ಕಷ್ಟ ಅನುಭವಿಸಿ,  ಬಸವಣ್ಣನವರ ಅಂಗ­ರಕ್ಷಕನಾಗಿ ಸೇವೆ ಸಲ್ಲಿಸುತ್ತಾ, ನೀಲಮ್ಮನವರನ್ನು ರಕ್ಷಿಸಲು ತಂಗಡಗಿಯಲ್ಲಿ ನೆಲೆನಿಂತವರು ಅಪ್ಪಣ್ಣ.

ನೀಲಮ್ಮನವರು ಸಮಾಧಿಸ್ಥರಾದ ನಂತರ, ಅವರೂ ತಂಗಡಗಿಯಲ್ಲಿ ಸಮಾಧಿಸ್ಥ­ರಾದರು. ಈ ಸಮಾಧಿಗಳನ್ನು  ಸಂರಕ್ಷಿಸಿಡ ಲಾಗಿದೆ. ಹಡಪದ, ಸವಿತಾ ಮುಂತಾದ ಹೆಸರಿ ನಿಂದ ಕರೆಯಲಾಗುವ  ಈ ಸಮಾಜದವರು ತಮ್ಮದೇ ಜಗದ್ಗುರುವನ್ನು ನಿಯಮಿಸಿ ಕೊಂಡಿದ್ದಾರೆ. ಹಡ­ಪದ ಅಪ್ಪಣ್ಣನವರನ್ನು ತಮ್ಮ ಕುಲಗುರು ಎಂದು ಪರಿಗಣಿಸಿ, ತಂಗಡಗಿಯನ್ನು ಕೇಂದ್ರ ಸ್ಥಾನವಾಗಿಸಿ­ಕೊಂಡಿದ್ದಾರೆ.

ಇಂಥ ಸಮಾಜದವರು ತಂಗಡಗಿ­ಯಲ್ಲಿ ತಮ್ಮ ಕುಲೋದ್ಧಾರಕರಾದ ಅಪ್ಪಣ್ಣನವರ ಹೆಸರಿನಲ್ಲಿ  ಸ್ಮಾರಕ ನಿರ್ಮಿಸಲು, ಮುದ್ದೇ­ಬಿಹಾಳ ತಹಶೀಲ್ದಾರ್ ಹಾಗೂ  ಕೂಡಲ­ಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತರು ವ್ಯತಿ­ರಿಕ್ತ ರಿಪೋರ್ಟು ಕೊಡುವುದೇಕೆ? ಇಂಥ ವಿಷಯ­ದಲ್ಲಿ ಅಧಿಕಾರಿ ವರ್ಗದವರು ಮೂಗು ತೂರಿಸು­ವುದು ಸರ್ವಥಾ ಸಲ್ಲದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.