ADVERTISEMENT

ಅಬ್ಬರದ ಪ್ರಚಾರ

ಕೌಡ್ಲೆ ರವಿ ಬೆಂಗಳೂರು
Published 6 ಜುಲೈ 2016, 19:30 IST
Last Updated 6 ಜುಲೈ 2016, 19:30 IST

ಮಾಧ್ಯಮಗಳಲ್ಲಿ ಇತ್ತೀಚೆಗೆ ರಾಜ್ಯ ಸರ್ಕಾರದ ಸಾಧನೆಯ ಜಾಹೀರಾತುಗಳೇ ತುಂಬಿ ಹೋಗಿವೆ. ಇದಕ್ಕಾಗಿ ವ್ಯಯಿಸುತ್ತಿರುವ ಹಣವೆಷ್ಟು ಎಂಬುದು ನಮ್ಮ ಜಿಜ್ಞಾಸೆಗೆ ಕಾರಣ.

ರಾಜ್ಯದ ಜನ ಸಾವಿರಾರು ಸಮಸ್ಯೆಗಳಿಂದ ನರಳುತ್ತಿದ್ದಾರೆ.  ಸರ್ಕಾರ ತನ್ನ ಪ್ರಚಾರಕ್ಕೆ ವ್ಯಯಿಸುತ್ತಿರುವ ಹಣದಿಂದ ಈ ಸಮಸ್ಯೆಗಳಲ್ಲಿ ಕೆಲವನ್ನಾದರೂ ಬಗೆಹರಿಸಬಹುದಿತ್ತು. ಜನ ಇಂಥ ಜಾಹೀರಾತುಗಳಿಗೆ ಕವಡೆ ಕಾಸಿನ ಬೆಲೆಯನ್ನೂ ಕೊಡರು.

ಅವರು ನೆನೆಯುವುದು ಕೆಲಸಗಳನ್ನು. ಇದಕ್ಕೆ ‘ನೀರ ಸಾಹೇಬ್ರು’ ನಜೀರ್ ಸಾಬ್ ಮತ್ತು ಮಾಜಿ ಶಿಕ್ಷಣ ಸಚಿವ ಗೋವಿಂದೇಗೌಡ ಅವರೇ ಉದಾಹರಣೆ. ಸರ್ಕಾರ ಇನ್ನಾದರೂ ನಾಗರಿಕರು ಮೆಚ್ಚುವಂತೆ ಕೆಲಸ ಮಾಡಲಿ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.