ADVERTISEMENT

ಅಭಿನಂದನೀಯ

ಹಲವಾಗಲ ಶಂಭು
Published 29 ಅಕ್ಟೋಬರ್ 2015, 19:46 IST
Last Updated 29 ಅಕ್ಟೋಬರ್ 2015, 19:46 IST

14 ವರ್ಷಗಳ ಹಿಂದೆ ಆಕಸ್ಮಿಕವಾಗಿ ಪಾಕಿಸ್ತಾನಕ್ಕೆ ಹೋಗಿದ್ದ ಗೀತಾ, ಮಾತೃಭೂಮಿಗೆ ಮರಳಿರುವುದು ಸಂತಸದ ಸುದ್ದಿ. ಹಿಂದೆ ಸರಬ್ಜಿತ್ ಸಿಂಗ್‌ನನ್ನು ಭಾರತಕ್ಕೆ ಕರೆತರಲು ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಧರಣಿ ಮಾಡಿದರೂ ಆಗಿನ ಯುಪಿಎ ಸರ್ಕಾರ ಕಿವಿಗೊಡಲಿಲ್ಲ.

ಪಾಕಿಸ್ತಾನ ಆತನನ್ನು ಕೊಂದು ಶವವನ್ನು ಭಾರತಕ್ಕೆ ಹಸ್ತಾಂತರಿಸಿದಾಗ ಹರಿಯಾಣ ಸರ್ಕಾರ, ಕೇಂದ್ರ ಸರ್ಕಾರ ಆತನ ಕುಟುಂಬಕ್ಕೆ ಪರಿಹಾರ ನೀಡಿ ಕೈತೊಳೆದುಕೊಂಡವು. ಕಿವುಡಿ, ಮೂಗಿಯಾಗಿದ್ದರೂ ತಾಯ್ನೆಲ ಸೇರುವ ಗೀತಾಳ ಮನದಿಂಗಿತವನ್ನು ಅರಿತು ಈಗಿನ ಸರ್ಕಾರ ಸ್ಪಂದಿಸಿದ್ದು ಅಭಿನಂದನೀಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.