ADVERTISEMENT

ಅಭ್ಯರ್ಥಿಗಳ ಆಸ್ತಿಪಾಸ್ತಿ...

ಶ್ರೀನಿವಾಸ ಹಾರೇಕೊಪ್ಪ, ಸಾಗರ
Published 22 ಏಪ್ರಿಲ್ 2013, 19:59 IST
Last Updated 22 ಏಪ್ರಿಲ್ 2013, 19:59 IST

ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರಗಳನ್ನು ಘೋಷಿಸುತ್ತಿರುವುದನ್ನು ಗಮನಿಸಿದ್ದೇನೆ. ಆಸ್ತಿ ಸ್ವಯಾರ್ಜಿತವೆ, ಪಿತ್ರಾರ್ಜಿತವೆ ಎಂಬುದನ್ನು ಹೇಳಿರುವುದಿಲ್ಲ. ಅಲ್ಲದೆ, ಬಹಳ ಮುಖ್ಯವಾಗಿ, ಅಭ್ಯರ್ಥಿಗಳ ಉದ್ಯೋಗವೇನೆಂದು ತಿಳಿಸಿರುವುದಿಲ್ಲ. ಚುನಾವಣಾ ಆಯೋಗ ಇದನ್ನು ಪ್ರಮುಖವಾಗಿ ಗಮನಿಸಬೇಕು.

ಅಭ್ಯರ್ಥಿಗಳ ಪತ್ನಿಯರ ಹೆಸರಿನಲ್ಲಿ ಕೆ.ಜಿ. ಲೆಕ್ಕದಲ್ಲಿ ಬೆಳ್ಳಿ ಬಂಗಾರ ಇರುತ್ತದೆ. ಇದರ ಮೂಲ ಯಾವುದು? ಅಪಾರ ಪ್ರಮಾಣದ ಸಾಲವನ್ನು ತೋರಿಸುತ್ತಾರೆ. ಇವರಿಗೆ ಸಾಲದ ಅವಶ್ಯಕತೆಯೇನು? ಎಲ್ಲಿಂದ ಈ ಪ್ರಮಾಣದ ಸಾಲ ಪಡೆಯುತ್ತಾರೆ? ಸಾಲವನ್ನು ಮರುಪಾವತಿಸಲು ಇವರಿಗೆ ವರಮಾನ ಏನಿರುತ್ತದೆ? ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳ ಆದಾಯ ಒಂದೆರಡು ವರ್ಷಗಳಲ್ಲೆ ಕೋಟಿ ಕೋಟಿ ಲೆಕ್ಕದಲ್ಲಿ ಹೆಚ್ಚಾಗುವುದಾದರೂ ಹೇಗೆ?

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಉದ್ಯೋಗ, ಅವರ ಪತ್ನಿ ಮತ್ತು ಮಕ್ಕಳ ಉದ್ಯೋಗ ಹಾಗೂ ಇತ್ತೀಚಿನ ಐದು ವರ್ಷಗಳಲ್ಲಿ ಅವರು ಪಾವತಿಸಿದ ಆದಾಯ ತೆರಿಗೆ ಮುಂತಾದ ವಿವರಗಳನ್ನು ಘೋಷಿಸುವುದನ್ನೂ ಕಡ್ಡಾಯಗೊಳಿಸಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.