ADVERTISEMENT

ಅರಮನೆ ಉಳಿಯಲಿ

ಪೂರ್ಣಿಮಾ ಮೂರ್ತಿ
Published 5 ಅಕ್ಟೋಬರ್ 2015, 19:34 IST
Last Updated 5 ಅಕ್ಟೋಬರ್ 2015, 19:34 IST

ರಾಜ್ಯ ಸರ್ಕಾರ ಮೈಸೂರು ಅರಮನೆಯನ್ನು ವಶಪಡಿಸಿಕೊಂಡು ಕಚೇರಿಗಳನ್ನು ಸ್ಥಾಪಿಸಬೇಕು ಎಂದು ‘ಸಂವಿಧಾನ ಭಾರತ’ ಕುರಿತ ಸಂವಾದದಲ್ಲಿ ರೈತಪರ ಹೋರಾಟಗಾರ ಕಡಿದಾಳ್ ಶಾಮಣ್ಣನವರು ಹೇಳಿರುವುದು (ಪ್ರ.ವಾ. ಅ. 4) ಒಪ್ಪತಕ್ಕ ಮಾತಲ್ಲ. 

ಹಳ್ಳಿ, ದಿಲ್ಲಿಗಳ ಬೆನ್ನೆಲುಬಾಗಿರುವ ಕೃಷಿಕ ಬಾಂಧವರ ಪರಿಸ್ಥಿತಿ ದಿನೇದಿನೇ ಶೋಚನೀಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುವ ಬದಲು, ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ, ನಮ್ಮ ಸಂಸ್ಕೃತಿಯ ಪ್ರತೀಕವಾದ ಹೆಮ್ಮೆಯ ವಿಶ್ವವಿಖ್ಯಾತ ದಸರಾ ಮಹೋತ್ಸವವನ್ನು ನಿಲ್ಲಿಸಬೇಕೆನ್ನುವುದು ಹಾಗೂ ಮೈಸೂರು ಅರಮನೆಯ ಸ್ಥಳದಲ್ಲಿ ಕಚೇರಿಗಳನ್ನು ಸ್ಥಾಪಿಸಬೇಕು ಎಂದು ಹೇಳುವುದು ಸಮರ್ಥನೀಯವಲ್ಲ.

ರಾಜ್ಯವನ್ನು ಆಳಿದ ಅರಸರ ಕಾಲಘಟ್ಟದಲ್ಲಿ ಅಸ್ತಿತ್ವಕ್ಕೆ ಬಂದಿರುವ ಅರಮನೆಯನ್ನು ಮುಂದಿನ ಪೀಳಿಗೆಗೆ ಭವ್ಯ ಐತಿಹ್ಯ ಸಾರುವ ಸ್ಮಾರಕವಾಗಿ ಉಳಿಸಬೇಕಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.