
ಅಲ್ಲಿ ಲೆನಿನ್ ಪ್ರತಿಮೆಯನ್ನು
ಕೇಕೆಗಳ ನಡುವೆ ಧರೆಗುರುಳಿಸಿದರು
ಆದರೆ, ಆತ ಗಟ್ಟಿಯಾಗಿ ನಿಂತಿದ್ದಾನೆ
ಪಠ್ಯಪುಸ್ತಕಗಳ ಪುಟಪುಟಗಳಲ್ಲಿ
ಗ್ರಂಥಾಲಯಗಳ ಕಪಾಟುಗಳಲ್ಲಿ!
ಗಾಂಧಿ, ಪೆರಿಯಾರ್, ಅಂಬೇಡ್ಕರರ
ಪ್ರತಿಮೆಗಳನ್ನು ಉರುಳಿಸಬಹುದು;
ಚಿಂತನೆಗಳನ್ನು ಅಳಿಸಲಾದೀತೆ?
ನೆನಪಿರಲಿ,
ಮಹಾತ್ಮರು ಬದುಕಿರುವುದು ಪ್ರತಿಮೆಗಳಲ್ಲಲ್ಲ
ಜನರ ಹೃದಯ ಮಂದಿರಗಳಲ್ಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.