ADVERTISEMENT

ಅವರಿಗಿದೆ, ನಮಗೇಕಿಲ್ಲ...

ಅಬ್ದುಲ್ ಖಾದರ್, ಮಂಗಳೂರು
Published 21 ಮಾರ್ಚ್ 2013, 19:59 IST
Last Updated 21 ಮಾರ್ಚ್ 2013, 19:59 IST

ಭಾರತೀಯ ಮೀನುಗಾರರನ್ನು ಕೊಂದ ಇಟಲಿಯ ಇಬ್ಬರು ನಾಗರಿಕರನ್ನು ಭಾರತಕ್ಕೆ ಮರಳಿಸಲು ಆ ದೇಶವು ನಿರಾಕರಿಸಿರುವುದಕ್ಕೆ ಆಶ್ಚರ್ಯಪಡಬೇಕಾಗಿಲ್ಲ.

  ಇಲ್ಲಿನ ಜೈಲಿನಲ್ಲಿರುವವರು ಹಬ್ಬ ಆಚರಿಸಲು ವಿದೇಶಗಳಿಗೂ ಹೋಗಿ ಬರಲು ಅವಕಾಶ ಸಿಗುತ್ತದೆ. ಅಥವಾ ಮತದಾನ ಮಾಡಲೂ ತಮ್ಮ ದೇಶಗಳಿಗೆ ಹೋಗಿ ಬರುವಷ್ಟರ ಮಟ್ಟಿಗೆ ನಮ್ಮ ದೇಶವು ಉದಾರವಾದಿಯಾಗಿದೆ. ಹಾಗೆ ನೋಡಿದರೆ, ಭಾರತದಲ್ಲಿ ಜೈಲುಗಳಲ್ಲಿರುವ ಲಕ್ಷಾಂತರ ಮಂದಿ ಚುನಾವಣೆ ದಿನ ಮತದಾನದಿಂದ ವಂಚಿತರಾಗುತ್ತಿದ್ದಾರೆ.

ಅವರು ಮತದಾನ ಮಾಡಲಿಕ್ಕೆ ಅವಕಾಶ ಕೇಳಿದರೂ, ಅನುಮತಿ ಸಿಗದು. ಆದರೆ ಜೈಲುಗಳಲ್ಲಿರುವ ವಿದೇಶೀ ಕೊಲೆ ಅಪರಾಧಿಗಳು ಮಾತ್ರ ತಮ್ಮ ದೇಶಕ್ಕೆ ಹೋಗಿ ಮತದಾನ ಮಾಡಿ ಬರಬಹುದು.

ವಿದೇಶೀಯರಿಗೆ ಮತದಾನಕ್ಕೆ ಹೋಗಿ ಬರಲು ಅವಕಾಶ ನೀಡುವ ಭಾರತದ ಕಾನೂನು, ಭಾರತೀಯರಿಗೇಕೆ ತಮ್ಮ ನೆಲದಲ್ಲಿ ಮತದಾನದ ಅವಕಾಶ ನಿರಾಕರಿಸುತ್ತದೆ?
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.