ADVERTISEMENT

ಅವ್ಯವಸ್ಥೆ ನಿವಾರಿಸಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 5 ಮೇ 2014, 19:30 IST
Last Updated 5 ಮೇ 2014, 19:30 IST
ಅವ್ಯವಸ್ಥೆ ನಿವಾರಿಸಿ
ಅವ್ಯವಸ್ಥೆ ನಿವಾರಿಸಿ   

ಕುಮಾರ ಪಾರ್ಕ್ ಪಶ್ಚಿಮದ ಒಂಬತ್ತನೇ ‘ಎ’ ಅಡ್ಡರಸ್ತೆಯಲ್ಲಿರುವ  ಸರ್‌ಪೆಂಟೈನ್‌ ರಸ್ತೆಗೆ ಅಡ್ಡವಾಗಿ ಕಸ ತುಂಬಿಕೊಂಡು ಹೋಗುವ ವಾಹನಗಳನ್ನು ನಿಲ್ಲಿಸುತ್ತಾರೆ. ಶೇಷಾದ್ರಿಪುರದಿಂದ ಇಲ್ಲಿಗೆ ಬರಲು ಇರುವ ಮೆಟ್ಟಿಲು ರಸ್ತೆ ಮೂಲಕ ಹೋಗಲು ಸ್ಥಳವೇ ಇಲ್ಲದಂತಾಗಿದೆ.

ಇದು ಸಾಲದು ಎಂಬಂತೆ ಮನೆಯ ಕಸವನ್ನೆಲ್ಲಾ ಇಲ್ಲಿಯೇ ತಂದು ಹಾಕುತ್ತಾರೆ. ಇದರಿಂದಾಗಿ ಇಡೀ ವಾತಾವರಣ ದುರ್ನಾತ ಬೀರುತ್ತಿದ್ದು, ಅಕ್ಕಪಕ್ಕದ ಮನೆಗಳಿಗೆ ಹಾಗೂ ಪಾದಚಾರಿಗಳಿಗೆ ತುಂಬ ತೊಂದರೆಯಾಗುತ್ತಿದೆ.

ಕಸ ಸಾಗಿಸುವ ವಾಹನಗಳು ಇಲ್ಲಿಯೇ ನಿಲ್ಲುವುದರಿಂದ ನಿತ್ಯವೂ ಕೆಟ್ಟ ವಾಸನೆಯ ಯಾತನೆ ಅನುಭವಿಸಬೇಕಾಗಿದೆ. ಜತೆಗೆ ಮಲೇರಿಯಾ ಮುಂತಾದ ರೋಗಗಳು ಹರಡುವ ಸಾಧ್ಯತೆಯೂ ಇದೆ. ಈ ಅವ್ಯವಸ್ಥೆಯನ್ನು ನಿವಾರಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.