ADVERTISEMENT

ಅಶ್ಲೀಲ ಚಿತ್ರಗಳಿಗೆ ಕಡಿವಾಣ ಹಾಕಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 19:30 IST
Last Updated 15 ಫೆಬ್ರುವರಿ 2012, 19:30 IST

ಈಗ ಬರುತ್ತಿರುವ ಎಲ್ಲ ಭಾಷೆಗಳ ಸಿನಿಮಾಗಳಲ್ಲಿ ಆಶ್ಲೀಲ ದೃಶ್ಯಗಳು ಹೆಚ್ಚಾಗಿವೆ. ಜನರು ಇಂತಹ ದೃಶ್ಯಗಳನ್ನು ನೋಡುವುದಕ್ಕಾಗಿಯೇ ಚಿತ್ರಮಂದಿರಗಳಿಗೆ ಜನರು ಬರುತ್ತಾರೆ ಎಂದು ಸಿನಿಮಾ ಮಂದಿ ಭಾವಿಸಿದಂತಿದೆ.
 
ಸಿನಿಮಾ ಬಿಡುಗಡೆಗೆ ಮೊದಲು ಸೆನ್ಸಾರ್ ಮಂಡಳಿಯ ಪರಿಶೀಲಿಸಿ ಪ್ರಮಾಣ ಪತ್ರ ನೀಡುವ ವ್ಯವಸ್ಥೆ ಇದ್ದರೂ ಅಶ್ಲೀಲ ದೃಶ್ಯಗಳು ನುಸುಳಿ ಬರುತ್ತವೆ. ಇಂತಹ ದೃಶ್ಯಗಳು ಯುವಜನರ ಮೇಲೆ ಕೆಟ್ಟ ಪರಿಣಾಮ ಬೀರುವುದರಿಂದ ಇಂತಹ ದೃಶ್ಯಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ.

ಹೀಗೆ ಹೇಳಿದರೆ ಅಶ್ಲೀಲ ದೃಶ್ಯಗಳು ಇಲ್ಲದ ಚಿತ್ರಗಳು ಬರುತ್ತಿದ್ದ ಕಾಲದಲ್ಲೂ ಸಾಕಷ್ಟು ಅನಾಚಾರ, ಅತ್ಯಾಚಾರಗಳು ನಡೆಯುತ್ತಿದ್ದವು ಎಂದು ವಾದ ಮಾಡಬಹುದು. ಆದರೆ ಅನೇಕ ಚಿತ್ರಗಳಲ್ಲಿ ನಾಯಕಿ ಅಥವಾ ನೃತ್ಯಗಾತಿಯರನ್ನು ಸಾಧ್ಯವಾದಷ್ಟೂ ಅರೆ ಬೆತ್ತಲೆ ತೋರಿಸುವ ದೃಶ್ಯಗಳು ತುರುಕಿದಂತೆ ಇರುತ್ತವೆ. ಇಂತ ದೃಶ್ಯಕ್ಕೂ ಸಿನಿಮಾದ ಕಥೆಗೂ ಸಂಬಂಧವೇ ಇರುವುದಿಲ್ಲ.

ಸಿನಿಮಾಗಳನ್ನು ಯುವಜನರು ಅನುಕರಣೆ ಮಾಡುತ್ತಾರೆ. ಉಡುಪುಗಳ ವಿನ್ಯಾಸಕ್ಕೂ ಸಿನಿಮಾಗಳೇ ಪ್ರೇರಣೆ. ಈ ಹಿನ್ನೆಲೆಯಲ್ಲಿ ಅಶ್ಲೀಲ ಎನಿಸುವಂತಹ ದೃಶಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.