ADVERTISEMENT

ಆಘಾತಕಾರಿ ಅಂಶ

ದಿನೇಶ್‌ ಕೆ.ಕಾರ್ಯಪ್ಪ
Published 4 ಜನವರಿ 2016, 19:35 IST
Last Updated 4 ಜನವರಿ 2016, 19:35 IST

ದೇಶದ ಸುಮಾರು ಅರ್ಧದಷ್ಟು ಮಹಿಳೆಯರು ಅನಕ್ಷರಸ್ಥರು ಎಂದು 2011ರ ಜನಗಣತಿ ವರದಿ ತಿಳಿಸಿದೆ  (ಪ್ರ.ವಾ., ಜ. 1). ಇದು ನಿಜಕ್ಕೂ ಅಘಾತಕಾರಿ ಅಂಶ. ವಯಸ್ಕರ ಶಿಕ್ಷಣ ಸೇರಿದಂತೆ ಸರ್ಕಾರ ಸಾಕ್ಷರತಾ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ವ್ಯಯಿಸಿದರೂ ಮಹಿಳೆಯರ ಶಿಕ್ಷಣ ಮಟ್ಟ ಸುಧಾರಿಸದಿರುವುದು ವಿಷಾದನೀಯ.

‘ಮಹಿಳೆಯೊಬ್ಬರು ಕಲಿತರೆ ಕುಟುಂಬವೊಂದು ಕಲಿತಂತೆ’ ಎಂಬುದನ್ನು ಗಮನದಲ್ಲಿರಿಸಿ ಮಹಿಳಾ ಸಾಕ್ಷರತೆಗೆ ಒತ್ತು ನೀಡಬೇಕಾದ ತುರ್ತು ಒದಗಿದೆ.  ಇಲ್ಲದಿದ್ದರೆ ನಮ್ಮೆಲ್ಲ ‘ಅಭಿವೃದ್ಧಿ’ ಮೌಢ್ಯದಲ್ಲಿ ಮರೆಯಾಗುವ  ಅಪಾಯವಿದೆ. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ಸಾಕ್ಷರತೆಗೆ ಸರ್ಕಾರ ಹೆಚ್ಚಿನ ಗಮನ ಕೊಡಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.