ADVERTISEMENT

ಆತ್ಮಾವಲೋಕನ ಮಾಡಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 19:30 IST
Last Updated 18 ಏಪ್ರಿಲ್ 2012, 19:30 IST

`ಪಿಡಿಒಗಳಿಗೆ ಸರ್ಕಾರದ ರಕ್ಷಣೆ~ ಲೇಖನದ ಎಲ್ಲ ಸಂಗತಿಗಳೂ ಸತ್ಯಸಂಗತಿಗಳೇ. ಆದರೆ ಜನ ಪ್ರತಿನಿಧಿಗಳ ಪಿತೂರಿ, ಮಾನಸಿಕ ಹಿಂಸೆ ಮತ್ತು ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿ ಕೊಳ್ಳುವುದು ಸರಿಯಲ್ಲ. ಇಂಥ ಸ್ಥಿತಿ ಕೇವಲ ತಮಗೆ ಮಾತ್ರವಲ್ಲ ಎಂಬುದನ್ನು ಪಿಡಿಒ ಬಂಧುಗಳು ಅರಿತುಕೊಳ್ಳಬೇಕು. ಸಿಬ್ಬಂದಿಗೆ  ಕಿರುಕುಳ ನೀಡಿದಿದ್ದರೆ `ಜನಪ್ರತಿನಿಧಿ~ಎಂಬ ಪದಕ್ಕೆ ಅಪಮಾನ ಮಾಡಿದಂತೆ ಎಂಬಂತೆ ಅವರು ಭಾವಿಸಿದ್ದಾರೆ.

ಹಾಗೆಂದು ಪಿಡಿಒ ಗಳೆಲ್ಲರೂ ಪ್ರಾಮಾಣಿಕರೇ? ಎಂಬುದನ್ನೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ. ಇಲ್ಲಿ ಪ್ರಾಮಾ ಣಿಕ ಅಧಿಕಾರಿಗಳಿಗೆ ಭ್ರಮನಿರಸನವಾಗುವುದು ಖಚಿತ, ಇದಕ್ಕೆ ಆತ್ಮಹತ್ಯೆ ಪರಿಹಾರವಲ್ಲ. ಹಾಗೆಂದು ಸರ್ಕಾರ ಅಧಿಕಾರಿಗಳಿಗೆ ರಕ್ಷಣೆ ನೀಡು ತ್ತಿಲ್ಲ ಎಂದರೆ ತಪ್ಪಾದೀತು. ಬಳ್ಳಾರಿ ಗಣಿರಾಜ್ಯ ದಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳಿಗೆ ಸರ್ಕಾರ ರಕ್ಷಣೆ ನೀಡಿಲ್ಲವೆ? 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.