ಸುಮಾರು ಎರಡು ವರ್ಷಗಳಿಂದ ಯಲಹಂಕ ಬಳಿಯ ಅಳ್ಳಾಳಸಂದ್ರದ ರೈಲ್ವೆ ಕ್ರಾಸಿಂಗ್ ಬಳಿ, ಸಾರ್ವಜನಿಕರ ಅನುಕೂಲಕ್ಕಾಗಿ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ. ಇದರ ಸಂಪೂರ್ಣ ಕಾಮಗಾರಿಯು ಮುಗಿದಿದ್ದು, ಅದನ್ನು ಉಪಯೋಗಿಸಲು ಸಾರ್ವಜನಿಕರಿಗೆ ಅನುವು ಮಾಡಿಕೊಟ್ಟಿಲ್ಲ. ಅದರ ಉದ್ಘಾಟನೆಯೂ ಆಗಿಲ್ಲ.
ಇದರಿಂದ ಪ್ರತಿದಿನ ಬೆಂಗಳೂರು ನಗರದ ಕಡೆ ಪ್ರಯಾಣ ಮಾಡಲು ಬಯಸುವ ಪ್ರಯಾಣಿಕರು ಯಲಹಂಕದ ಕೋಗಿಲು ಕ್ರಾಸ್‌ನಿಂದ ಹೆಚ್ಚುವರಿಯಾಗಿ ಎರಡು ಕಿಲೋಮೀಟರ್ ಬಳಸಿಕೊಂಡು ಬಳ್ಳಾರಿ ರಸ್ತೆಯಿಂದ ವಿಮಾನ ನಿಲ್ದಾಣ ತಲುಪಬೇಕಿದೆ. ಇದರಿಂದ ಯಲಹಂಕ ಉಪನಗರ ಹಾಗೂ ದೊಡ್ಡಬಳ್ಳಾಪುರದಿಂದ ಈ ಮಾರ್ಗ ಬಳಸುವುವವರಿಗೆ ಬಹಳ ತೊಂದರೆಯಾಗುತ್ತಿದೆ. ಕಾಮಗಾರಿಗಳು ಮುಗಿದಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಉದ್ಘಾಟಿಸಿ, ನಾಗರಿಕರ ಉಪಯೋಗಕ್ಕೆ ನೀಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.