ಚಾಮರಾಜನಗರ ಜಿಲ್ಲೆಯ ಕೊಳ್ಳೆ ಗಾಲ ತಾಲ್ಲೂಕಿನ ಒಡೆಯರ ಪಾಳ್ಯದ ಪಕ್ಕದ ಗುಡ್ಡ ಪ್ರದೇಶದಲ್ಲಿ ವಾಸಿಸುತ್ತಿರುವ ಸೋಲಿಗ(ಗಿರಿಜನರ)ರ ಕಷ್ಟ ಹೇಳತೀರದಾಗಿದೆ. ಅಲ್ಲಿರುವ ಜನರು ಕುಡಿಯುವ ನೀರಿಲ್ಲದೆ ಜೀವನ ನಡೆಸುವ ಪರಿಸ್ಥಿತಿ ಬಂದಿದೆ.
ನೀರಿಗಾಗಿ ಪ್ರತಿನಿತ್ಯ ಎರಡರಿಂದ ಮೂರು ಕಿಲೋ ಮೀಟರ್ ನಡೆದುಕೊಂಡು ಹೋಗಿ ನೀರು ತರಬೇಕಾಗಿದೆ. ಅಲ್ಲಿ ಸರಿಯಾದ ರಸ್ತೆಯ ವ್ಯವಸ್ಥೆಯೂ ಇಲ್ಲ. ಅಲ್ಲಿ ಸುಮಾರು ೩೦ ರಿಂದ ೪೦ ಕುಟುಂಬಗಳು ವಾಸವಾಗಿವೆ. ಸರ್ಕಾರ ಇತ್ತ ಗಮನಹರಿಸಿ ಆದಿವಾಸಿಗಳಿಗೆ ನೆರವಾಗಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.