ADVERTISEMENT

ಆಯುರ್ವೇದ ವೈದ್ಯರ ಉಪೇಕ್ಷೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 19:30 IST
Last Updated 8 ಫೆಬ್ರುವರಿ 2012, 19:30 IST

ಬಿ.ಎ.ಎಂ.ಎಸ್ (ಬ್ಯಾಚುಲರ್ ಆಫ್ ಆಯುರ್ವೇದಿಕ್ ಮೆಡಿಸನ್ ಆ್ಯಂಡ್ ಸರ್ಜರಿ) ವೈದ್ಯ ಪದವಿ ಎಂ.ಬಿ.ಬಿ.ಎಸ್.ನಷ್ಟೇ ಮಹತ್ವದ್ದು. ನಾಲ್ಕೂವರೆ ವರ್ಷದ ಓದು, ಒಂದು ವರ್ಷದ ಇಂಟರ್ನ್‌ಶಿಪ್ ಸೇರಿದಂತೆ ಐದೂವರೆ ವರ್ಷದ ಕೋರ್ಸ್.

ಪ್ರತಿ ವರ್ಷ ಸುಮಾರು 2500 ಬಿ.ಎ.ಎಂ.ಎಸ್. ಪದವೀಧರರು ಕಾಲೇಜುಗಳಿಂದ ಹೊರ ಬರುತ್ತಾರೆ. ಅಷ್ಟೇ ಸಂಖ್ಯೆಯ ಎಂಬಿ.ಬಿ.ಎಸ್ ಪದವೀಧರು ತೇರ್ಗಡೆ ಆಗುತ್ತಾರೆ. ಆದರೆ ಬಿ.ಎ.ಎಂ.ಎಸ್. ಪದವೀಧರರಿಗೆ ಅವಕಾಶಗಳು ಕಡಿಮೆ. ಎಂ.ಬಿ.ಬಿ.ಎಸ್. ವೈದ್ಯರಿಗೆ  ಸರ್ಕಾರ  ಕೋಟ್ಯಂತರ ರೂ ಖರ್ಚು ಮಾಡುತ್ತದೆ. ನೇಮಕಾತಿಯಲ್ಲಿ ಆದ್ಯತೆ ನೀಡಿ ಆಯುರ್ವೇದ ವೈದ್ಯರನ್ನು ಉಪೇಕ್ಷಿಸಿದೆ. ಈ ಪ್ರವೃತ್ತಿ ಖಂಡನೀಯ.

ಆರೋಗ್ಯ ಇಲಾಖೆಯಲ್ಲಿ ವೈದ್ಯರ ಕೊರತೆ ಇದೆ ಎಂದು ಹೇಳುವ ಸರ್ಕಾರ ಆಯುರ್ವೇದ ವೈದ್ಯರನ್ನು ಹಳ್ಳಿಗಳ ಆರೋಗ್ಯ ಕೇಂದ್ರಗಳಿಗೆ ಭರ್ತಿ ಮಾಡಿಕೊಳ್ಳಲು ಹಿಂಜರಿಯುತ್ತಿದೆ. ಈ ವೈದ್ಯರು ಖಾಸಗಿಯಾಗಿ ವೃತ್ತಿ ಆರಂಭಿಸಿದರೆ ಇಲಾಖೆಯ ಅಧಿಕಾರಿಗಳು ಕಿರುಕುಳ  ಕೊಡುತ್ತಾರೆ.

ಭಾರತದ 14 ರಾಜ್ಯಗಳಲ್ಲಿರುವಂತೆ ಆಯುರ್ವೇದ ವೈದ್ಯರ ನೇಮಕಾತಿ ಮಾಡಿಕೊಳ್ಳಲು ಕರ್ನಾಟಕ ಸರ್ಕಾರಕ್ಕೆ ಮನಸ್ಸಿಲ್ಲ. ಭಾರತೀಯ ಆರ್ಯುವೇದ ಪದ್ಧತಿ ವಿನಾಶದ ಅಂಚಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಆಸ್ಪತ್ರೆಗಳಿಗೆ ಬಿ.ಎ.ಎಂ.ಎಸ್. ವೈದ್ಯರ ನೇಮಕ ಮಾಡಿಕೊಳ್ಳುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.